ಹೀಗೂ ಉಂಟು- 1 ಮತ್ತು 2ನೇ ತರಗತಿ ವಿದ್ಯಾಥರ್ಿಗಳಿಗೆ ಹೋಮ್ ವಕರ್್ ರದ್ದು, ಬ್ಯಾಗ್ ಭಾರ ಇಳಿಸಿದ ಹೆಚ್ ಆರ್ ಡಿ ಸಚಿವಾಲಯ!
0
ನವೆಂಬರ್ 26, 2018
ನವದೆಹಲಿ: 1 ಮತ್ತು 2 ನೇ ತರಗತಿ ವಿದ್ಯಾಥರ್ಿಗಳಿಗೆ ಹೋಮ್ ವಕರ್್ ರದ್ದುಪಡಿಸಿ ಮತ್ತು ಶಾಲಾ ಬ್ಯಾಗ್ ಭಾರ ಇಳಿಸುವಂತೆ ನಿದರ್ೇಶಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿದರ್ೇಶನ ನೀಡಿದೆ.
ಬೋಧಿಸುವ ವಿಷಯ ಹಾಗೂ ಶಾಲಾ ಬ್ಯಾಗ್ ತೂಕದ ಕುರಿತು ಕೇಂದ್ರ ಸಕರ್ಾರದ ಸೂಚನೆಯಂತೆ ಮಾರ್ಗದಶರ್ಿ ಸೂತ್ರ ರೂಪಿಸುವಂತೆ ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು 1ಮತ್ತು 2ನೇ ತರಗತಿ ಮಕ್ಕಳಿಗೆ ಹೋಮ್ ವಕರ್್ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ.
1 ಮತ್ತು 2ನೇ ತರಗತಿ ವಿದ್ಯಾಥರ್ಿಗಳಿಗೆ ಭಾಷೆ ಹಾಗೂ ಗಣಿತ ವಿಷಯ ಹೊರತುಪಡಿಸಿ ಉಳಿದ ಯಾವುದೇ ವಿಷಯಗಳನ್ನು ಬೋಧಿಸುವಂತಿಲ್ಲ. ಮೂರರಿಂದ ಐದನೇ ತರಗತಿ ವಿದ್ಯಾಥರ್ಿಗಳಿಗೆ ಎನ್ ಸಿಇಆರ್ ಟಿ ಸಲಹೆಯಂತೆ ಗಣಿತ ಹಾಗೂ ಇವಿಎಸ್ ವಿಷಯ ಬೋಧಿಸಬಹುದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಹೆಚ್ಚುವರಿ ಪುಸ್ತಕಗಳು, ಸಲಕರಣೆಗಳನ್ನು ತರುವಂತೆ ವಿದ್ಯಾಥರ್ಿಗಳಿಗೆ ಹೇಳುವಂತಿಲ್ಲ, ಶಾಲಾ ಬ್ಯಾಗ್ ತೂಕ ನಿಗದಿಪಡಿಸಿದಕ್ಕಿಂತ ಹೆಚ್ಚಿಗೆ ಇರುವಂತಿಲ್ಲ ಆದೇಶದಲ್ಲಿ ತಿಳಿಸಲಾಗಿದೆ. 1 ಮತ್ತು 2ನೇ ತರಗತಿ ವಿದ್ಯಾಥರ್ಿಗಳ ಶಾಲಾ ಬ್ಯಾಗ್ 1.5 ಕೆಜಿ ಹಾಗೂ ಮೂರರಿಂದ ಐದನೇ ತರಗತಿ ವಿದ್ಯಾಥರ್ಿಗಳ ಶಾಲಾ ಬ್ಯಾಗ್ 2 ರಿಂದ 3 ಕೆಜಿಗಿಂತಲೂ ಹೆಚ್ಚು ತೂಕ ಇರುವಂತಿಲ್ಲ ಎಂದು ಸೂಚಿಸಲಾಗಿದೆ.
ಆರು ಮತ್ತು ಏಳನೇ ತರಗತಿ ವಿದ್ಯಾಥರ್ಿಗಳ ಶಾಲಾ ಬ್ಯಾಗ್ ತೂಕ 4 ಕೆಜಿ ಹಾಗೂ 8 ಮತ್ತು ಒಂಬತ್ತನೇ ತರಗತಿ ವಿದ್ಯಾಥರ್ಿಗಳ ಶಾಲಾ ಬ್ಯಾಗ್ ತೂಕ 4.5 ಕೆಜಿಗಿಂತ ಹೆಚ್ಚು ಇರುವಂತಿಲ್ಲ. 10ನೇ ತರಗತಿ ವಿದ್ಯಾಥರ್ಿಗಳ ಶಾಲಾ ಬ್ಯಾಗ್ 5 ಕೆಜಿಗಿಂತ ಹೆಚ್ಚು ತೂಕ ಇರಬಾರದೆಂದು ಹೊಸ ಆದೇಶದಲ್ಲಿ ಹೇಳಲಾಗಿದೆ.



