ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಪಂಜಾಬ್ ಸಿಎಂ
0
ನವೆಂಬರ್ 26, 2018
ಗುದರ್ಾಸ್ ಪುರ: ಪಾಕಿಸ್ತಾನ ಕದನವಿರಾಮ ಉಲ್ಲಂಘನೆ ಮಾಡುತ್ತಿರುವುದರ ಕುರಿತು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪಾಕ್ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ಕತರ್ಾರ್ ಪುರ ಕಾರಿಡಾರ್ ಗೆ ಶಿಲನ್ಯಾಸ ನೆರವೇರಿಸಿದ ನಂತರ ಪಾಕ್ ನ ಸೇನಾ ಮುಖ್ಯಸ್ಥರನ್ನು ಪ್ರಶ್ನಿಸಿರುವ ಅಮರಿಂದರ್ ಸಿಂಗ್ "ನಿಮಗೆ ನಾನು ಎಚ್ಚರಿಕೆ ನೀಡುತ್ತಿದ್ದೆನೆ, ನಾವೂ ಕೂಡಾ ಪಂಜಾಬಿಗಳೇ, ನೀವು ಭಾರತವನ್ನು ಪ್ರವೇಶಿಸುವುದಕ್ಕಾಗಲೀ ಇಲ್ಲಿನ ವಾತಾವರಣ ಹದಗೆಡಿಸುವುದಕ್ಕಾಗಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘನೆ ಹೇಡಿಗಳ ಲಕ್ಷಣ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಾಕ್ ಸೇನಾ ಮುಖ್ಯಸ್ಥರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕದನ ವಿರಾಮ ಉಲ್ಲಂಘನೆ ಮಾಡಿ ಎದುರಾಳಿ ಸೈನಿಕರನ್ನು ಹತ್ಯೆ ಮಾಡಲು ಯಾವ ಸೇನೆ ಹೇಳಿಕೊಡುತ್ತದೆ? ಪಠಾಣ್ ಕೋಟ್ ಹಾಗೂ ಅಮೃತ್ ಸರಕ್ಕೆ ದಾಳಿ ನಡೆಸಲು ಜನರನ್ನು ಕಳಿಸುವುದನ್ನು ಯಾವ ಸೇನೆ ಹೇಳಿಕೊಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕತರ್ಾರ್ ಪುರ ಕಾರಿಡಾರ್ ಗೆ ಪಾಕಿಸ್ತಾನದಲ್ಲಿ ನ.28 ರಂದು ಶಿಲನ್ಯಾಸ ನೆರವೇರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಪಾಕ್ ಸಕರ್ಾರ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರನ್ನೂ ಆಹ್ವಾನಿಸಿತ್ತು. ಆದರೆ ಪಾಕಿಸ್ತಾನದಿಂದ ನಿರಂತರವಾಗಿ ಕದನ ವಿರಾಮ ಉಲ್ಲಂಘನೆಯ ಕಾರಣ ನೀಡಿದ್ದ ಅಮರಿಂದರ್ ಸಿಂಗ್ ಪಾಕ್ ಆಹ್ವಾನವನ್ನು ನಿರಾಕರಿಸಿದ್ದರು.


