ಡಿ.11ರಿಂದ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ
0
ನವೆಂಬರ್ 25, 2018
ಮುಳ್ಳೇರಿಯ: ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವವು ಡಿ.11 ಮತ್ತು 12ರಂದು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.11ರಂದು ಬೆಳಿಗ್ಗೆ 11 ಕ್ಕೆ ಉಗ್ರಾಣ ಮುಹೂರ್ತ, ಮಧ್ಯಾಹ್ನ 3ಕ್ಕೆ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, ಸಂಜೆ 6 ರಿಂದ ಭಜನೆ, 7ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ರಾತ್ರಿ 9ಕ್ಕೆ ಅನ್ನದಾನ ನಡೆಯಲಿದೆ.
ಡಿ.12ರಂದು ಬೆಳಿಗ್ಗೆ 5 ರಿಂದ ಗಣಪತಿ ಹೋಮ, ಬ್ರಹ್ಮಕಲಶಪೂಜೆ, 6.44 ಮತ್ತು 7.02ರ ಮುಹೂರ್ತದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಯವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಚಿತ್ರ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, 8ರಿಂದ ಭಜನೆ, 10ಕ್ಕೆ ಧಾಮರ್ಿಕ ಸಭೆ, ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡುವರು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾಮರ್ಿಕ ಭಾಷಣಮಾಡುವರು, ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರ ಸೇವಾಸಮಿತಿ ಅಧ್ಯಕ್ಷ ಪದ್ಮನಾಭ ಭಟ್, ಅಡೂರು ಶ್ರೀಕ್ಷೇತ್ರ ಸಮಿತಿ ಕಾರ್ಯದಶರ್ಿ ಗಂಗಾಧರ ಕಾಂತಡ್ಕ, ಅಪ್ಪಕುಂಞಿ ಗುರುಸ್ವಾಮಿ ಅಡೂರು, ಕುಂಞಿಕಣ್ಣ ಗುರುಸ್ವಾಮಿ ಪಾಂಡಿ, ಕೆ.ವಿ.ಚಂದು ಗುರುಸ್ವಾಮಿ, ಎಂ.ಸಿ.ನಾಯರ್ ಗುರುಸ್ವಾಮಿ, ಯಾದವ ರಾವ್ ಗುರುಸ್ವಾಮಿ ಕುಂಟಾರು, ಶಶಿಧರ ಗುರುಸ್ವಾಮಿ ಗಾಳಿಮುಖ, ನಾರಾಯಣ ರೈ ಗುರುಸ್ವಾಮಿ ಗುತ್ತು, ಡಾ.ಕಾತರ್ಿಕ್ ಗಾಳಿಮುಖ, ನಾರಾಯಣ ಕೇಕಡ್ಕ, ಗಾಳಿಮುಖ ಗೇರು ಕಾಖರ್ಾನೆ ಮಾಲಕ ಶ್ರೀಕಾಂತ್, ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಜನಾರ್ದನ, ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಮಾಧವ ಭಾಗವಹಿಸುವರು. ಸುಂದರಿ ಗಾಳಿಮುಖ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, 1.30ಕ್ಕೆ ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕುಂಟಾರು ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ ಕೂಟ, ಸಂಜೆ 4.30ಕ್ಕೆ ಭಜನೆ, 6.30 ರಿಂದ ಬ್ರಹ್ಮಶ್ರೀ ವಾಸುದೇವತಂತ್ರಿ ಕುಂಟಾರು, ದಾಮೋದರ ಮಾಸ್ತರ್ ಸುಳ್ಯಪದವು, ಚಿನ್ಮಯಿ.ವಿ.ಭಟ್ ಮತ್ತು ಬಳಗದವರಿಂದ ಗಾನವೈವಿಧ್ಯ, ರಾತ್ರಿ 7ಕ್ಕೆ ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರದಿಂದ ಉಲ್ಪೆ ಮೆರವಣಿಗೆ, 8ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯವರಿಂದ ಶರಣಂ ಘೋಷ, 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವ್ರತಧಾರಿಗಳಿಗೆ ಫಲಾಹಾರ, ಅನ್ನದಾನ ನಡೆಯಲಿದೆ.

