ಕೆ.ಎಸ್.ಎಸ್.ಪಿ.ಯು ವಕರ್ಾಡಿ ಘಟಕ : ಕುಟುಂಬ ಸಂಗಮ, ಸಮ್ಮಾನ ಕಾರ್ಯಕ್ರಮ
0
ನವೆಂಬರ್ 25, 2018
ಮಂಜೇಶ್ವರ: ಕೇರಳ ಸ್ಟೇಟ್ ಸವರ್ೀಸ್ ಪೆನ್ಶನರ್ಸ್ ಯೂನಿಯನ್ (ಕೆಎಸ್ಎಸ್ಪಿಯು) ವಕರ್ಾಡಿ ಘಟಕದ ಕುಟುಂಬ ಸಂಗಮ ಮತ್ತು ಸಮ್ಮಾನ ಸಮಾರಂಭ ನ.29 ರಂದು ಬೆಳಗ್ಗೆ 9.30 ಕ್ಕೆ ದೈಗೋಳಿ ಶ್ರೀಕೃಷ್ಣ ಯೋಗ ಮತ್ತು ಧ್ಯಾನಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ನೋಂದಾವಣೆ, 10 ರಿಂದ ಸಭೆ ನಡೆಯಲಿದ್ದು, ಕೆಎಸ್ಎಸ್ಪಿಯು ಜಿಲ್ಲಾ ಕಾರ್ಯದಶರ್ಿ ಪಿ.ಕುಂಞಂಬು ನಾಯರ್ ಉದ್ಘಾಟಿಸುವರು. ಸಂಘಟನೆಯ ವಕರ್ಾಡಿ ಘಟಕ ಅಧ್ಯಕ್ಷ ಕೆ.ತಿರುಮಲೇಶ್ವರ ಭಟ್ ಕಣಕ್ಕೂರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಪಾಧ್ಯಕ್ಷ ಯು.ರವಿಚಂದ್ರ, ಬ್ಲಾಕ್ ಕಾರ್ಯದಶರ್ಿ ವಿ.ಶೀನಪ್ಪ ಪೂಜಾರಿ, ಉಸ್ತುವಾರಿ ರವೀಂದ್ರನ್, ಘಟಕ ಉಪಾಧ್ಯಕ್ಷರಾದ ವೆಂಕಟೇಶ್ವರ ಭಟ್, ಕೆ.ಬಂಟಪ್ಪ ಪೂಜಾರಿ, ಘಟಕ ಕೋಶಾಧಿಕಾರಿ ಎಸ್.ಶಂಕರನಾರಾಯಣ ಭಟ್ ಶುಭ ಹಾರೈಸುವರು.
ಈ ಸಂದರ್ಭದಲ್ಲಿ ಹಿರಿಯ ಪಿಂಚಣಿದಾರರಾದ ಗೋವಿಂದ ಭಟ್, ಮೇಬಲ್ ಸಿಕ್ವೇರಾ ಅವರನ್ನು ಸಮ್ಮಾನಿಸಲಾಗುವುದು. ಮಂಜೇಶ್ವರ ಬ್ಲಾಕ್ ಸಂಚಾಲಕ ಟಿ.ಮೋನಪ್ಪ ಪೂಜಾರಿ ಸಮ್ಮಾನಿತರ ಪರಿಚಯ ಮಾಡಲಿದ್ದಾರೆ. ಘಟಕದ ಜೊತೆ ಕಾರ್ಯದಶರ್ಿ ಶಶಿಪ್ರಭಾ, ಕಾರ್ಯದಶರ್ಿ ಎ.ಬಿ.ರಾಧಾಕೃಷ್ಣ ಬಲ್ಲಾಳ್, ಜೊತೆ ಕಾರ್ಯದಶರ್ಿ ವಿ.ಚಂದ್ರಶೇಖರ ಹೊಳ್ಳ ಭಾಗವಹಿಸುವರು. ಅಪರಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

