ಸಾಹಿತ್ಯ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ
0
ನವೆಂಬರ್ 25, 2018
ಬದಿಯಡ್ಕ: ನೀಚರ್ಾಲು ಸಮೀಪದ ಪುದುಕೋಳಿಯ ಜ್ಯೋತಿಷಿ ಕೃಷ್ಣಮೂತರ್ಿ ಪುದುಕೋಳಿ ಅವರ ಮನೆಯಲ್ಲಿ ಡಿ.2ರಂದು ಬೆಳಗ್ಗೆ 9ರಿಂದ ಸಾಹಿತ್ಯ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರ ಸಾಂಸ್ಕೃತಿಕ ಸಂಘ, ಉಪ್ಪಿನಂಗಡಿ ಸತ್ಯ ಶಾಂತ ಪ್ರೊಡಕ್ಷನ್ಸ್, ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ವಿವಿಧ ಕೃತಿಗಳ ಬಿಡುಗಡೆ, ಸಾಧಕರಿಗೆ ಸಮ್ಮಾನ, ಬಾಲ ಕವಿಗೋಷ್ಠಿ, ಯುವ ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಹಿರಿಯರ ಕವಿಗೋಷ್ಠಿಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕನರ್ಾಟಕದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಾನ್ಯದ ನಿವೃತ್ತ ಮುಖ್ಯ ಶಿಕ್ಷಕ ಮಾನ ಮಾಸ್ತರ್ ಮಾನ್ಯ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೆದಿಲಾಯ ಪ್ರತಿಷ್ಠಾನದ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ, ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಮೂತರ್ಿ ಪುದುಕೋಳಿ, ನಿವೃತ್ತ ಮುಖ್ಯ ಶಿಕ್ಷಕಿ ಸುಧಾದೇವಿ ಪಿ.ಜಿ, ಉಷಾಬಿಂದು, ಯಕ್ಷಮಿತ್ರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ ಮಾನ್ಯ, ವಿಜಯ ಕುಮಾರ್ ಮಾನ್ಯ, ಕೃಪಾಲು ಶರ್ಮ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.


