HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಮತ್ತೆ ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ದೇಗುಲ, ಮುಂದುವರಿದ ಗೊಂದಲ, ನಾಮಜಪ ಸಂಕೀರ್ತನಾ ಚಳವಳಿ ಆರಂಭ
                      ಭದ್ರತೆಗಾಗಿ 2, 300 ಪೊಲೀಸರ ನಿಯೋಜನೆ
     ಪತ್ತನಂತಿಟ್ಟ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸೋಮವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಮತ್ತೆ ತೆರೆದಿದ್ದು, ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಮಲೆ ಏರುವೆವು ಎಂಬ ಹಠದಲ್ಲಿ ಮಹಿಳೆಯೊಬ್ಬಳು ಆಗಮಿಸಿ ಗೊಂದಲ ಮತ್ತೆ ಸೃಷ್ಟಿಯಾಗಿದೆ.
    ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯ ಬಾಗಿಲು ತೆರೆದಿದ್ದು,  ಭಕ್ತಾಧಿಗಳು ಪವಿತ್ರ 18 ಮೆಟ್ಟಿಲುಗಳನ್ನು ಏರುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ ಮತ್ತೆ ದೇಗುಲದ ಬಾಗಿಲು ಬಂದ್ ಆಗಲಿದೆ.
    ಎಲ್ಲಾ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ  ದೇಗುಲ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂಬ ಸುಪ್ರೀಂಕೋಟರ್್ ತೀಪರ್ು ಅನುಷ್ಠಾನ ಹಿನ್ನೆಲೆಯಲ್ಲಿ ಕಳೆದ ತಿಂಗಳ ಅಕ್ಟೋಬರ್ 17 ರಿಂದ 22ರವರೆಗೂ ಹಿಂದೂಪರ ಸಂಘಟನೆಗಳು ಕೇರಳ ಸಕರ್ಾರದ ವಿರೋಧ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆಸಿದ್ದರಿಂದ ಈ ಬಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
   ಈ ಹಿನ್ನೆಲೆಯಲ್ಲಿ ಈ ಬಾರಿ 20 ಸದಸ್ಯರನ್ನೊಳಗೊಂಡ ಕಮಾಂಡೊ ಪಡೆ, 100 ಮಹಿಳೆಯರು ಸೇರಿದಂತೆ ಸುಮಾರು 2 ಸಾವಿರದ 300 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
   ಅಯ್ಯಪ್ಪ ಸ್ವಾಮಿ ದೇಗುಲದ ಸಂಕೀರ್ಣದಲ್ಲಿ 15 ಮಂದಿಗ ಮಹಿಳಾ ಸಿಬ್ಬಂದಿಯೂ ನಿಯೋಜಿಸಿರುವುದಾಗಿ ಎಂದು ಭದ್ರತೆ ಉಸ್ತುವಾರಿ ವಹಿಸಿರುವ ಐಜಿ ಅಜಿತ್  ಕುಮಾರ್ ತಿಳಿಸಿದ್ದಾರೆ.
   ಈ ಮಧ್ಯೆ ರಾತ್ರಿ 7ರ ವೇಳೆ ಮಹಿಳೆಯೊಬ್ಬರು ಪಂಪೆಗೆ ಆಗಮಿಸಿದ್ದು, ಈ ವೇಳೆ ಶಬರಿಮಲೆ ಸಂರಕ್ಷಣಾ ಸಮಿತಿಯ ನೂರಾರು ಅಯ್ಯಪ್ಪ ಭಕ್ತರು ಹಠಾತ್ ಆಗಮಿಸಿ ತಡೆಹಿಡಿದರು. ಪೋಲೀಸರು ಭದ್ರತೆಯೊದಗಿಸಿ ಅಯ್ಯಪ್ಪ ದರ್ಶನಕ್ಕೆ ಸಹಾಯ ನೀಡಲು ಮೊದಲು ಮುಂದೆ ಬಂದಿದ್ದರೂ ಬಳಿಕ ಪ್ರತಿಭಟನ ಕಾರರ ಮುಗಿಲು ಮುಟ್ಟಿದ ನಾಮಜಪ ಸಂಕೀರ್ತನೆಯ ಕಾರಣ ತಾತ್ಕಾಲಿಕವಾಗಿ ಮಹಿಳೆಯ ಅಯ್ಯಪ್ಪ ದರ್ಶನವನ್ನು ತಡೆಹಿಡಿಯಲಾಯಿತು. ಇಂದು ಬೆಳಿಗ್ಗೆ ಆ ಮಹಿಳೆ ಶಬರಿಮಲೆ ದರ್ಶನಗೈಯ್ಯುವ ಸಾಧ್ಯತೆಯಿದ್ದು, ಬಿಜೆಪಿ ಸಹಿತ ಭಕ್ತ ಜನ ಸಮಿತಿ ಈ ಬಗ್ಗೆ ಪ್ರಬಲ ಹೋರಾಟದ ಮುನ್ನೆಚ್ಚರಿಕೆ ನೀಡಿದೆ.
   ಈ ಮಧ್ಯೆ ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಅಗತ್ಯದ ಕುಡಿಯುವ ನೀರು, ದೇವರ ದರ್ಶನಕ್ಕೆ ಸುವ್ಯವಸ್ಥಿತ ಕ್ರಮಗಳನ್ನು ದೇವಸ್ವಂ ಬೋಡರ್್ ಅನುಸರಿಸಿಲ್ಲವೆಂಬ ದೂರುಗಳು ಕೇಳಿಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries