ತಿರುವನಂತಪುರ: ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗಾಗಿಯೇ ಎರಡು ಪ್ರತ್ಯೇಕ ದಿನಗಳನ್ನು ಮೀಸಲಿಡಬಹುದು, ಆ ಮೂಲಕ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಬೇಕೆಂಬ ಸುಪ್ರೀಂ ಕೋಟರ್್ ಆದೇಶ ಪಾಲನೆ ಸಾಧ್ಯ ಎಂದು ಕೇರಳ ಸರಕಾರ ಅಭಿಪ್ರಾಯಪಟ್ಟಿದೆ.!!
ಅಯ್ಯಪ್ಪ ದರ್ಶನದ ವೇಳೆ ವಿಶೇಷ ಭದ್ರತೆಗಾಗಿ ಮನವಿ ಮಾಡಿ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅಜರ್ಿಯ ವಿಚಾರಣೆ ವೇಳೆ ಸರಕಾರ ಕೇರಳ ಹೈಕೋಟರ್್ ಮುಂದೆ ಈ ಸಲಹೆ ಇಟ್ಟಿದೆ.
ಕೆಲವು ರಾಜಕೀಯ ಪಕ್ಷಗಳು ದೇಗುಲಕ್ಕೆ ಮಹಿಳೆಯರ ಪ್ರವೇಶ ತಡೆಯುವ ಬಗ್ಗೆ ಬಹಿರಂಗವಾಗಿಯೇ ಘೋಷಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಮಹಿಳೆಯರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ಕೋರಿದ್ದರು.ವಿಚಾರಣೆ ವೇಳೆ ನ್ಯಾಯಮೂತರ್ಿಗಳು ಇದಕ್ಕೆ ಸರಕಾರದ ಪ್ರತಿಕ್ರಿಯೆಯನ್ನು ಕೇಳಿದಾಗ, ಸರಕಾರ ಮಹಿಳಾ ದರ್ಶನಕ್ಕೆ ನಿದರ್ಿಷ್ಟ ದಿನಗಳನ್ನು ನಿಗದಿಪಡಿಸುವ ಸಲಹೆ ಮುಂದಿಟ್ಟಿತು. ದೇಗುಲದ ಆಡಳಿತ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ ಜತೆ ಸಮಾಲೋಚನೆ ಬಳಿಕ ದಿನಾಂಕ ಗೊತ್ತುಪಡಿಸುವುದಾಗಿ ಸರಕಾರ ತಿಳಿಸಿತು.
ಇತ್ತೀಚೆಗೆ ನಡೆದ ಸರ್ವ ಪಕ್ಷ ಸಭೆಯಲ್ಲೂ ಸಿಎಂ ಪಿಣರಾಯಿ ವಿಜಯನ್ ಇಂತಹ ಸಲಹೆಯನ್ನು ಮುಂದಿಟ್ಟಿದ್ದರು. ಆದರೆ, ಮಹಿಳೆಯರ ಪ್ರವೇಶ ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
ಮಹಿಳೆಯರಿಂದಲೂ ಮನವಿ:
ಬಿಜೆಪಿ, ಕಾಂಗ್ರೆಸ್ ಮತ್ತು ಅಯ್ಯಪ್ಪ ಭಕ್ತರ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಶಬರಿಮಲೆಯಲ್ಲಿ ಸಂಘರ್ಷ ಸೃಷ್ಟಿಸುತ್ತಿದ್ದು, ಈ ಕಾರಣದಿಂದಾಗಿ ನಾವು ರಕ್ಷ ಣೆ ಬಯಸಿ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಇಂಥಾ ಪರಿಸ್ಥಿತಿಯಲ್ಲಿ ಶಬರಿಮಲೆಯಲ್ಲಿ ಮಹಿಳಾ ದರ್ಶನಕ್ಕಾಗಿ ಎರಡು ಅಥವಾ ಮೂರು ದಿನ ಮೀಸಲಿಡಬೇಕು ಎಂದು ಅಜರ್ಿಯಲ್ಲಿ ಮನವಿ ಮಾಡಲಾಗಿದೆ.
ಸೆ.28ರಂದು ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ಮಾಡಬಹುದು ಎಂದು ನ್ಯಾಯಾಲಯ ತೀಪರ್ು ನೀಡಿದ ನಂತರ ಕಪ್ಪು ಬಟ್ಟೆ ಧರಿಸಿ ನಾವು ಸಂಪ್ರದಾಯದ ಪ್ರಕಾರ ವ್ರತಾಚರಣೆ ಮಾಡಿದ್ದೇವೆ. ಅಯ್ಯಪ್ಪ ಭಕ್ತರಾದ ನಮಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಹಿಳೆಯರು ಅಜರ್ಿಯಲ್ಲಿ ಹೇಳಿದ್ದಾರೆ. ಅಜರ್ಿಯ ಮುಂದಿನ ವಿಚಾರಣೆ ನ.28ಕ್ಕೆ ನಡೆಯಲಿದೆ.


