ಅಯೋಧ್ಯಾ : ರಾಮ ಮಂದಿರ ನಿಮರ್ಾಣಕ್ಕೆ ಅವಕಾಶ ಆಗ್ರಹಿಸಿ ಭಾನುವಾರ ಆಯೋಜನೆಗೊಂಡಿರುವ ಬೃಹತ್ ಧರ್ಮಸಭೆ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರದ ಗಮನ ಅಯೋಧ್ಯೆಯ ಮೇಲೆ ನೆಟ್ಟಿದೆ. ದೇಶಾದ್ಯಂತದ ಲಕ್ಷಾಂತರ ಸಾಧು-ಸಂತರು, ಸಂಘ ಪರಿವಾರದ ಕಾರ್ಯಕರ್ತರು ಅಯೋಧ್ಯೆ ಕಡೆಗೆ ಸಾಗುತ್ತಿದ್ದು, ಧರ್ಮಸಭೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸುಗ್ರೀವಾಜ್ಞೆ ಅಥವಾ ಕಾನೂನಿನ ಮೂಲಕ ಮಂದಿರ ನಿಮರ್ಾಣಕ್ಕೆ ಅವಕಾಶ ನೀಡಬೇಕೆಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದ್ದು, ಉತ್ತರ ಪ್ರದೇಶ ಸರಕಾರ ಭಾರಿ ಭದ್ರತಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದೆ.
ಶಿವಸೇನೆಯೂ ಶನಿವಾರ ಮತ್ತು ಭಾನುವಾರ ಅಯೋಧ್ಯೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮೊದಲು ಮಂದಿರ, ನಂತರ ಸರಕಾರ ಘೋಷಣೆಯೊಂದಿಗೆ ಶಿವಸೇನೆ ಕಾರ್ಯಕರ್ತರು ಆಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.


