ಬದುಕು ಬದಲಿಸುವ ಕ್ರಿಯಾತ್ಮಕ ನಡೆಯ ಸಾಹಿತ್ಯ ಚಟುವಟಿಕೆಗಳ ಅಗತ್ಯ ಇದೆ-ಎನ್.ಗಂಗಾಧರ ಮಣಿಯಾಣಿ ನೆಲ್ಲಿತ್ತಲ
0
ನವೆಂಬರ್ 25, 2018
ಬದಿಯಡ್ಕ: ವೈವಿಧ್ಯ ವಿಚಾರಗಳನ್ನು ತಿಳಿದಷ್ಟೂ ಜೀವನಾನುಭವ ಹೆಚ್ಚುತ್ತದೆ. ಪುಸ್ತಕ, ಕೃತಿಗಳ ಓದು, ಪ್ರೋತ್ಸಾಹ ಬದುಕಿನ ನಿಲುಮೆಗಳಿಗೆ ನಿತ್ಯ ವಿಮಶರ್ೆಯೊದಗಿಸುತ್ತದೆ ಎಂದು ಪೈಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಬಂಧಕ ಎನ್.ಗಂಗಾಧರ ಮಣಿಯಾಣಿ ನೆಲ್ಲಿತ್ತಲ ಅಭಿಪ್ರಾಯ ವ್ಯಕ್ತಪಡಿಸಿದರು.
ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಬದಿಯಡ್ಕ ಶಾಖೆ ಆಯೋಜಿಸುತ್ತಿರುವ ಕನ್ನಡ ಸಾಹಿತ್ಯ ಸಿರಿ ತಿಂಗಳ ಕಾರ್ಯಕ್ರಮದ 6ನೇ ಕಾರ್ಯಕ್ರಮ ಕನರ್ಾಟಕ ರಾಜ್ಯೋತ್ಸವವನ್ನು ಶನಿವಾರ ಬದಿಯಡ್ಕದ ಶ್ರೀರಾಮಲೀಲಾ ಯೋಗಕೇಂದ್ರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸಾಧನಾಶೀಲ ವ್ಯಕ್ತಿಯ ಹಿಂದೆ ಮಹಾನ್ ಗ್ರಂಥಗಳ, ಕವಿಗಳ ಪ್ರೆರಣೆ ಇದ್ದೇ ಇರುತ್ತದೆ. ಈ ಕಾರಣದಿಂದ ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಆದರ್ಶಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇಂದಿನ ಯುವ ಜನಾಂಗ ಸದಾಶ್ರಯಗಳಿಲ್ಲದೆ ದಿಕ್ಕೆಟ್ಟಿರುವುದು ಅಸಂತುಷ್ಠಿಗೆ ಕಾರಣವಾಗುತ್ತಿದ್ದು, ಬದುಕು ಬದಲಿಸುವ ಓದು, ಬರಹಗಳತ್ತ ಯುವ ಜನತೆಯನ್ನು ಕರೆತರಲು ಇಂತಹ ಚಟುವಟಿಕೆಗಳು ಪ್ರೇರಣೆ ನೀಡಲಿ ಎಂದು ಅವರು ಈ ಸಮದರ್ಭ ತಿಳಿಸಿದರು.
ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷ, ನಿವೃತ್ತ ಉಪಯೋಂದಾವಣಾಧಿಕಾರಿ ಮೊಹಮ್ಮದಾಲಿ ಪೆರ್ಲ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತ್ಯಾಭಿಮಾನಿ, ಸಮಾಜ ಸೇವಕ ಪಿ.ಕೆ.ಗೋಪಾಲಕೃಷ್ಣ ಭಟ್ ಪೆಮರ್ುಖ ಅವರಿಗೆ ರಾಜ್ಯೋತ್ಸವ ಗೌರವಾರ್ಪಣೆ ಸಮಪರ್ಿಸಿ ಅಭಿನಂದಿಸಲಾಯಿತು. ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಅಭಿನಂದನಾ ಭಾಷಣಗೈದರು. ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಸಾಹಿತಿ ಪುರುಷೋತ್ತಮ ಆಚಾರ್ಯ ಎನ್. ಅವರಿಗೆ ಸಾಹಿತ್ಯ ಸಿರಿ ಗೌರವಾರ್ಪಣೆ ನಡೆಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅಭಿನಂದನಾ ಭಾಷಣಗೈದರು.
ಕನ್ನಡ ನಾಡು ನುಡಿಗೆ ವಿಶೆಷ ಕಾಳಜಿಯಿಂದ ಸೇವೆಗೈದ ಹಿರಿಯ ತಲೆಮಾರಿನ ಶ್ರೇಷ್ಠ ಸಾಧಕರ ನೆನಪಿಸುವಿಕೆಯ ಜೊತೆಗೆ ಅವರ ಸಾಧನೆಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಗಳಿಗೆ ಆಧುನಿಕ ಸಮಾಜ ನಿಷ್ಠರಾಗಿರಬೇಕು. ಆ ಮೂಲಕ ಮಣ್ಣಿನ ಋಣ ತೀರಿಸುವ ಹೊಣೆ ನಮ್ಮಲ್ಲಿದೆ ಎಂದು ಕನ್ನಡ ರಾಜ್ಯೋತ್ಸವದ ಬಗ್ಗೆ ವಿಶೇಷೋಪನ್ಯಾಸ ನೀಡಿದ ಪಿಲಿಂಗಲ್ಲು ಕೃಷ್ಣ ಭಟ್ ಈ ಸಂದರ್ಭ ಕರೆನೀಡಿದರು. ಸಾಹಿತ್ಯ ಕೃತಿಗಳನ್ನು ಕೊಂಡು ಓದುವ, ಇತರರಿಗೆ ಪ್ರೇರಣೆ ನೀಡುವ ಮನಸ್ಸು ನಮ್ಮದಾಗಿರಲಿ ಎಂದು ಅವರು ತಿಳಿಸಿದರು. ಅನೇಕ ಸವಾಲುಗಳ ಮಧ್ಯೆ ಗಡಿನಾಡು ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯುವ ತಲೆಮಾರನ್ನು ಮುನ್ನಡೆಸುವ ಹೊಣೆ ಹಿರಿಯರ ಮೇಲಿದೆ ಎಂದು ತಿಳಿಸಿದರು.
ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಸಾಧಕರನ್ನು ಗೌರವಿಸಿದರು. ಅವರು ಮಾತನಾಡಿ, ಬರೆಯುವ ಕಾಯಕದೊಳಗೆ ಓದುಗರು ಯಾರೆಂಬ ಭೀತಿ ಬೇಡ. ಕವಿಯಾದವನು ನಿರಂತರ ಕೃತಿ ರಚನೆಯ ಮೂಲಕ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಬೇಕು ಎಂದು ತಿಳಿಸಿದರು. ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ ಉಪಸ್ಥಿತರಿದ್ದರು.
ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ರಾಧಾಕೃಷ್ಣ ಉಳಿಯತ್ತಡ್ಕ ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಶ್ರೀಕೃಷ್ಣ ಗಾರುಡಿ ಕಥಾ ಸಂಕೀರ್ತನೆ ನಡೆಯಿತು.ಶಿವಾನಂದ ಆಚಾರ್ಯ ಮಾಯಿಪ್ಪಾಡಿ(ಹಾಮರ್ೋನಿಯಂ)ಹಾಗೂ ಅಚ್ಯುತ್ತ ಆಚಾರ್ಯ ಕೂಡ್ಲು (ತಬಲಾ)ದಲ್ಲಿ ಸಹಕರಿಸಿದರು. ಯೋಗ ಶಿಕ್ಷಕ ಸೂರ್ಯನಾರಾಯಣ ನಿರೂಪಿಸಿದರು. ಪುರುಷೋತ್ತಮ ಭಟ್ ಕೆ ಹಾಗೂ ಚೇತನಾ ಕೂಡ್ಲು ಸ್ವರಚಿತ ಕವನಗಳನ್ನು ವಾಚಿಸಿದರು.


