ಉಪ್ಪಳ: ರಾಷ್ಟ್ರದಲ್ಲೇ ಅತ್ಯಂತ ದೊಡ್ಡದೆಂಬ ಹೆಗ್ಗಳಿಕೆಯ ವಿನೋದ ವಸ್ತುಪ್ರದರ್ಶನ ತಂಡವಾದ ಡಿ.ಜೆ ಅಮ್ಯೂಸ್ಮೆಂಟ್ ವಸ್ತು ಪ್ರದರ್ಶನ ತಂಡದವರಿಂದ ಉಪ್ಪಳ ಕೈಕಂಬದಲ್ಲಿ ಜನಸಾಮಾನ್ಯರ ಮನೋಲ್ಲಾಸಕ್ಕೆ ವಿವಿಧ ಡಿಜಿಟಲ್ ತಂತ್ರಜ್ಞಾನ ಆಧಾರಿತ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ಗಮನ ಸೆಳೆಯುತ್ತಿದೆ.
ಅತಿ ನೂತನ ತಂತ್ರಜ್ಞಾನವನ್ನು ಅಳವಡಿಸಿರುವ ರೋಬೋಟಿಕ್ ಕಾಡು ಮೃಗಗಳು, ಮಕ್ಕಳಿಂದ ಹಿರಿಯರ ವರೆಗೂ ಮುದ ನೀಡುವ ಅಮ್ಯೂಸ್ ಮೆಂಟ್ ಪಾಕರ್್, ರೋಮಾಂಚಕಾರಿ ಸಂಚಾರ ಅನುಭವ ನೀಡುವ ಕಾರುಗಳು, ಮರಣ ಬಾವಿ, ವಿವಿಧ ಆಹಾರ ವಸ್ತುಗಳನ್ನೂ ಏರ್ಪಡಿಸಲಾಗಿದೆ ಎಂದು ಸಂಘಟಕರು ಶನಿವಾರ ಸಂಜೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿನಿತ್ಯ 4 ರಿಂದ ಆರಂಭಗೊಳ್ಳುವ ವಸ್ತುಪ್ರದರ್ಶನ ನಯನ ಮನೋಹರ ಬೆಳಕಿನ ಆಟಗಳೊಂದಿಗೆ ಏರ್ಪಡಿಸಲಾಗಿದೆ. ರಾಜ್ಯದ ಇತ್ತೀಚೆಗೆ ಸಂಕಷ್ಟಕ್ಕೊಳಗಾದ ಪ್ರಾಕೃತಿಕ ದುರಂತ ನಿರ್ವಹಣೆಗೆ ಡಿ.ಜೆ ಅಮ್ಯೂಸ್ಮೆಂಟ್ ಸಂಘಟನೆ ವತಿಯಿಂದ 3 ಲಕ್ಷರೂ.ಗಳ ಪರಿಹಾರಧನವನ್ನು ಸರಕಾರಕ್ಕೆ ನೀಡಲಾಗಿದೆಯೆಂದು ಸಂಘಟಕರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿ.ಜೆ.ಅಮ್ಯೂಸ್ಮೆಂಟ್ ಆಡಳಿತ ನಿದರ್ೇಶಕ ಸಿ.ಕೆ.ದಿನೇಶ್ ಕುಮಾರ್, ರವೀಂದ್ರನ್, ವಿ.ಎಸ್.ಬೆನ್ನಿ, ರಾಜನ್, ಪ್ರಸಾದ್, ಹಸೈನಾರ್, ಸಂಯೋಜಕ ಅಜರ್ುನನ್ ತಾಯಿಲಂಗಾಡಿ, ಸತ್ಯನ್ ಸಿ.ಉಪ್ಪಳ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಪ್ರದರ್ಶನ ಡಿ.9 ರಂದು ಮುಕ್ತಾಯಗೊಳ್ಳಲಿದೆ.





