HEALTH TIPS

"2019ರ ಮಾರ್ಚ್ ಒಳಗೆ ಭಾರತದಲ್ಲಿ ಅರ್ಧದಷ್ಟು ಎಟಿಎಂಗಳ ಕಾರ್ಯನಿರ್ವಹಣೆ ಸ್ಥಗಿತ?



            ಮುಂಬೈ:  ಮಾರ್ಚ್ 2019 ರ ವೇಳೆಗೆ ದೇಶದಲ್ಲಿ 2.38 ಲಕ್ಷ ಎಟಿಂ ಗಳಲ್ಲಿ ಅರ್ಧದಷ್ಟು ಮುಚ್ಚಿಹೋಗಲಿದೆ. ನಿಯಂತ್ರಣ ಕ್ರಮಗಳಲ್ಲಿನ ಮಹತ್ವದ ಬದಲಾವಣೆಗಳು ಇದಕ್ಕೆ ಕಾರಣವಾಗಲಿದೆ ಎಂದು ಭಾರತೀಯ ಎಟಿಎಂ ಉದ್ಯಮದ ಒಕ್ಕೂಟ ಹೇಳಿದೆ.
         ಎಟಿಎಂ ಮುಚ್ಚುವಿಕೆಯು ಸಾವಿರಾರು ಉದ್ಯೋಗಿಗಳಿಗೆ ತೊಂದರೆಯಾಗಲಿದೆ ಅಲ್ಲದೆ ಸರ್ಕಾರದ ಆರ್ಥಿಕ ಬೆಳವಣಿಗೆ ನಿರೀಕ್ಷೆಯ ಮೇಲೆಯೂ ಪರಿಣಾಮ ಬೀರಲಿದೆ ಎಂದು ಒಕ್ಕೂಟದ ಹೇಳಿಕೆಯಲ್ಲಿ ವಿವರಿಸಿದೆ.
       "ಎಟಿಎಂ ಸೇವಾ ಪೂರೈಕೆದಾರರು ಮಾರ್ಚ್ 2019 ರೊಳಗೆ ದೇಶದಲ್ಲಿನ  ಸುಮಾರು 1.13 ಲಕ್ಷ ಎಟಿಎಂಗಳನ್ನು ಮುಚ್ಚುವುದಕ್ಕೆ ಮುಂದಾಗಲಿದ್ದಾರೆ. ಇದರಲ್ಲಿ ಸುಮಾರು ಒಂದು ಲಕ್ಷ ಆಫ್-ಸೈಟ್ ಎಟಿಎಂಗಳು ಮತ್ತು 15,000 ಕ್ಕಿಂತಲೂ ಹೆಚ್ಚು ವೈಟ್ ಲೇಬಲ್ ಏಟಿಎಂಗಳು ಸೇರಿದೆ ಉದ್ಯಮವು ಇದೀಗ ತಳಮಟ್ಟವನ್ನು ತಲುಪಿದೆ" ಹೇಳಿಕೆ ತಿಳಿಸಿದೆ.
        ಬಹುಪಾಲು ಗ್ರಾಮೀಣ ಭಾಗದಲ್ಲಿನ ಎಟಿಎಂಗಳು ಮುಚ್ಚಲ್ಪಡಲಿದ್ದು ಇಲ್ಲಿನ ಜನರು ಸರ್ಕಾರಿ ಸಬ್ಸಿಡಿಯನ್ನು ಪಡೆಯುವ ಸಲುವಾಗಿ ಎಟಿಎಂ ಯಂತ್ರಗಳನ್ನು ಬಳಸುವ ಕಾರಣ ಈ ಸೇವೆಯ ಮೇಲೆ ಪರಿಣಾಮ ಆಗಲಿದೆ.
       ಎಟಿಎಂ ಸಾಪ್ಟ್ವೇರ್ ಹಾಗೂ ಹಾರ್ಡ್ ವೇರ್ ಅಪ್ ಗ್ರೇಡ್ ಸೇರಿ ಬದಲಾದ ಮಾನದಂಡಗಳಿಂದ  ಎಟಿಎಂ ಕಾರ್ಯಾಚರಣೆಗ ನಡೆಸುವುದು ಕಠಿಣವಾಗಲಿದೆ ಎಂದು ಹೇಳಿಕೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries