ಕೊಚ್ಚಿ: ಶಬರಿಮಲೆ ಸನ್ನಿಧಾನದಲ್ಲಿ ತರಲಾದ ನಿಷೇಧಾಜ್ಞೆಯ ಬಗ್ಗೆ ವಿವರಣೆಗಳನ್ನು ರಾಜ್ಯ ಸರಕಾರ ನೀಡಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಶಬರಿಮಲೆ ಸನ್ನಿಧಿ, ಪಂಪೆ ಮೊದಲಾದೆಡೆ ಸರಕಾರ ಜಾರಿಗೆ ತಂದ ನಿಷೇಧಾಜ್ಞೆ ಮತ್ತು ಅಯ್ಯಪ್ಪ ಭಕ್ತರ ಕ್ಷೇತ್ರ ಸಮದರ್ಶನಕ್ಕೆ ನೀಡಿದ ನಿಯಂತ್ರಣಗಳನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನೀಡಿದ ಅಜರ್ಿ ಪರಿಶೀಲಿಸಿ ರಾಜ್ಯ ಉಚ್ಚ ನ್ಯಾಯಾಲಯ ಸರಕಾರಕ್ಕೆ ಈ ಬಗ್ಗೆ ಉತ್ತರಿಸಲು ಆದೇಶ ನೀಡಿದೆ.
ವಿಧಿಸಿರುವ ನಿಷೇಧಾಜ್ಞೆ ಯಾರನ್ನು ತಡೆಯುವ ಉದ್ದೇಶದಿಂದ ಎಂಬುದನ್ನು ಸರಕಾರ ಸ್ಪಷ್ಟಪಡಿಸಲು ನ್ಯಾಯಾಲಯ ತಿಳಿಸಿದೆ. ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುವ ಭಕ್ತರನ್ನು ಹಾಗೂ ಪ್ರತಿಭಟನೆಕಾರರನ್ನು ಸರಕಾರ ಹೇಗೆ ಗುರುತಿಸುತ್ತದೆ. ಅದಕ್ಕಿರಿಸಿದ ಮಾನದಂಡಗಳೇನು ಎಂದು ನ್ಯಾಯಾಲಯ ಸರಕಾರವನ್ನು ಪ್ರಶ್ನಿಸಿದೆ.
ಈ ಬಗ್ಗೆ ಸರಕಾರದ ಅಡ್ವಕೇಟ್ ಜನರಲ್ ನ್ಯಾಯಾಲಯದಲ್ಲಿ ವಿವರ ನಿಡುವರೆಂದು ಸರಕಾರ ತಿಳಿಸಿದ್ದು, ನ್ಯಾಯಾಲಯ ಸಮ್ಮತಿ ನೀಡಿದೆ.




