ಬದಿಯಡ್ಕ : ಅಯ್ಯಪ್ಪ ಸ್ವಾಮೀ ಭಜನಾ ಮಂದಿರ ಮಾವಿಕಟ್ಟೆಯಲ್ಲಿ 37 ನೇ ವಾಷರ್ಿಕೋತ್ಸವ ಇಂದಿನಿಂದ (ನ.20) ಪ್ರಾರಂಭಗೊಳ್ಳಲಿದೆ.
ಪೂವರ್ಾಹ್ನ 6 ಗಂಟೆಗೆ ದೀಪೋಜ್ವಲನ , 6.30 ಕ್ಕೆ ಮಹಾಗಣಪತಿ ಹವನ ಹಾಗೂ ಮುದ್ರಾಧಾರಣೆ, 8.30 ಕ್ಕೆ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಸಮಿತಿ ಮತ್ತು 9.30 ಕ್ಕೆ ನೆಕ್ರಾಜೆ ಶ್ರೀ ದುಗರ್ಾ ಮಹಿಳಾ ಭಜನಾ ಸಂಘ ಇವರಿಂದ ಭಜನೆ. ತತ್ವಮಸಿ ಸಿಂಗಾರಿ ಮೇಳ ಇವರಿಂದ ಸಿಂಗಾರಿಮೇಳ ಪ್ರದರ್ಶನ. ಅಪರಾಹ್ನ 12.30 ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ. ಸಾಯಂಕಾಲ 6 ಗಂಟೆಗೆ ಮವ್ವಾರು ಶ್ರೀ ಕೃಷ್ಣ ಭಜನಾ ಸಂಘದವರಿಂದ ಭಜನೆ. ರಾತ್ರಿ 8 ಗಂಟೆಗೆ ಶ್ರೀ ಸತ್ಯ ನಾರಾಯಣ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ. ರಾತ್ರಿ 9 ಗಂಟೆಗೆ ಅನ್ನದಾನ ನಡೆಯಲಿದೆ. ತದನಂತರ ಶ್ರೀ ಗಜಕೇಸರಿ ಫ್ರೆಂಡ್ಸ್ ದ್ವಾರಕ ನಗರ ಇವರ ಪ್ರಾಯೋಜಕತ್ವದಲ್ಲಿ ಶ್ರೀಕೃಷ್ಣ ಬಾಲಗೋಕುಲ ಅರಿಯಪ್ಪಾಡಿ ಮಾಡ ಇವರಿಂದ ನೃತ್ಯ ವೈವಿಧ್ಯ.
ಮರುದಿನ (ನ.21) ಪೂವರ್ಾಹ್ನ ಗಂಟೆ 5 ಕ್ಕೆ ಶರಣಂ ವಿಳಿ, 7.30 ರಿಂದ ಅಗಲ್ಪಾಡಿ ಶ್ರೀ ಗೋಪಾಲ ಕೃಷ್ಣ ಭಜನಾ ಸಂಘ ಇವರಿಂದ ಭಜನೆ. 8.30 ರಿಂದ ಉಬ್ರಂಗಳ ಶ್ರೀ ಧರ್ಮಶಾಸ್ತಾ ಭಜನಾ ಸಂಘ ಇವರಿಂದ ಭಜನೆ, 9.30 ರಿಂದ ದ್ವಾರಕಾ ನಗರ ಕೃಷ್ಣ ಲೀಲ ಬಾಲಗೋಕುಲ ಇವರಿಂದ ಭಜನೆ, 11 ಗಂಟೆಯಿಂದ ಧಾಮರ್ಿಕ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೃಷ್ಣ ಲೀಲ ಬಾಲಗೋಕುಲ, ದ್ವಾರಕಾ ನಗರ ಇವರ ಸದಸ್ಯರು ಪ್ರಾರ್ಥನೆ ಹಾಡಲಿರುವರು. ಮಂದಿರದ ಸೇವಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಲೋಕೇಶ್ ಕೋಳಾರಿ ಇವರಿಂದ ಸ್ವಾಗತ ಭಾಷಣ ನಡೆಯಲಿದೆ. ಸೇವಾ ಸಮಿತಿಯ ಅಧ್ಯಕ್ಷರಾದ ದಿವಾಕರ ಮಾವಿನಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಉತ್ತರ ಮಲಬಾರ್ ತೀಯ ಸಮುದಾಯ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ರಾಮ ಮಾಸ್ತರ್ ಇಕ್ಕೇರಿ ಧಾಮರ್ಿಕ ಭಾಷಣ ನಡೆಸುವರು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ಅಧ್ಯಾಪಕ ನಿರ್ಮಲ್ ಕುಮಾರ್ ಹಾಗೂ ರಾಜ್ಯ ಶಾಲಾ ಕಲೋತ್ಸವ ಯಕ್ಷಗಾನ ವಿಜೇತ ದತ್ತೇಶ್ ಮಾವಿನಕಟ್ಟೆ ಹಾಗೂ ಶಾಲಾ ದೇಶಿಯ ತ್ರೋಬಾಲ್ ವಿಜೇತೆ ಕುಮಾರಿ ವಿದ್ಯಾಲಕ್ಷ್ಮಿ ಇವರನ್ನು ಅಭಿನಂದಿಸಲಾಗುವುದು. ಹಿರಿಯ ವೈದಿಕರಾದ ಕೃಷ್ಣ ಚಡಗ ಪಳ್ಳತ್ತಮೂಲೆ, ಹಿರಿಯ ಯಕ್ಷಗಾನ ಕಲಾವಿದ ಸಂಜೀವ ಕುರುಪ್ ಚಾವಡಿಗದ್ದೆ , ಸೇವಾ ಸಮಿತಿಯ ಮಾಜಿ ಅಧ್ಯಕ್ಷರು ಎನ್.ಕೆ. ಕೃಷ್ಣನ್ ಮಾವಿನಕಟ್ಟೆ ಮೊದಲಾದವರು ಭಾಗವಹಿಸಲಿರುವರು. ಸೇವಾ ಸಮಿತಿಯ ಕೋಶಾಕಾರಿ ಗಂಗಾಧರ ನಡುಮೂಲೆ ವಂದಿಸುವರು. 12.30 ಕ್ಕೆ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ. ಅಪರಾಹ್ನ 2 ರಿಂದ ಬದಿಯಡ್ಕ ದಾಸ ಸಂಕೀರ್ತನ ಬಳಗದವರಿಂದ ಭಜನೆ. ಸಾಯಂಕಾಲ 5 ರಿಂದ ಮನು ಪಣಿಕ್ಕರ್ ಹಾಗೂ ಶ್ರೀ ಶೈಲಂ ನಾರಂಪಾಡಿ ಬಳಗದವರಿಂದ ತಾಯಂಬಕ. 6.30 ಕ್ಕೆ ನಾರಂಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರದಿಂದ ಉಲ್ಪೆ ಮೆರವಣಿಗೆ. ರಾತ್ರಿ 8 ಗಂಟೆಗೆ ನೆಕ್ರಾಜೆ ಶ್ರೀ ಗೋಪಾಲ ಕೃಷ್ಣ ಭಜನಾ ಸಂಘ ಇವರಿಂದ ಭಜನೆ. ರಾತ್ರಿ 10 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ. 10.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾಸಂಘ ಮಾವಿನಕಟ್ಟೆ ಇದರ 32 ನೇ ವಾಷರ್ಿಕೋತ್ಸವದ ಸಭಾ ಕಾರ್ಯಕ್ರಮ. 11 ರಿಂದ 2 ಗಂಟೆ ತನಕ ಯಕ್ಷ ಮಿತ್ರರು ಮಾವಿನಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಕದಂಬ ಕೌಶಿಕೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 2 ರಿಂದ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾಸಂಘ ಮಾವಿನಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ವೀರ ಅಭಿಮನ್ಯು ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ನವೆಂಬರ್ 22 ರಂದು ಪೂವರ್ಾಹ್ನ 5.30 ಕ್ಕೆ ಶರಣಂ ವಿಳಿ. 6 ಗಂಟೆಗೆ ದೀಪೋದ್ವಾಸನ ನಡೆಯಲಿದೆ.




