ಕಾಸರಗೋಡು: ಕಾಸರಗೋಡು ಕುಟುಂಬಶ್ರೀ ಜಿಲ್ಲಾ ಮಿಷನ್ನ ಅಧೀನದಲ್ಲಿ ಜಾರಿಗೊಳಿಸುವ ಕೊರಗ ಸ್ಪೆಷಲ್ ಪ್ರಾಜೆಕ್ಟ್ನ ಅಂಗವಾಗಿ ಜಿಲ್ಲೆಯ ಆಯ್ದ ಅನಿಮೇಟರ್ಗಳಿಗೆ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯ ಕಾರ್ಯದಶರ್ಿಗಳಿಗೆ, ಸಿಡಿಎಸ್ ಅಧ್ಯಕ್ಷೆಯರಿಗೆ, ಅಕೌಂಟೆಂಟ್ಗಳಿಗೆ ತ್ರಿದಿನ ತರಬೇತಿ ಕಾರ್ಯಕ್ರಮವು ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್ಐ)ದಲ್ಲಿ ಜರಗಿತು.
ಜಿಲ್ಲೆಯ 13 ಗ್ರಾಮ ಪಂಚಾಯತ್ಗಳಲ್ಲಿ ಜಾರಿಗೊಳಿಸುವ ಯೋಜನೆಯಲ್ಲಿ ಕೊರಗ ವಿಭಾಗದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಗಾಗಿ ಎನ್ಆರ್ಎಲ್ಎಂ ಅನುದಾನವನ್ನು ಉಪಯೋಗಿಸಲಾಗುತ್ತಿದೆ. ಪರಂಪರಾಗತ ಕಾಮರ್ಿಕರನ್ನು ಪತ್ತೆಹಚ್ಚಿ ಪ್ರೋತ್ಸಾಹಿಸಲು, ಅವರಿಗೆ ಹೊಸ ಜೀವನೋಪಾದಿಗಳನ್ನು ಆರಂಭಿಸಲು ಅಗತ್ಯವಿರುವ ಯೋಜನೆಗಳನ್ನು ಕೊರಗ ವಿಶೇಷ ಯೋಜನೆಯಲ್ಲಿ ಒಳಪಡಿಸಲಾಗಿದೆ.
ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ನೆರವೇರಿಸಿದರು. ಕುಟುಂಬಶ್ರೀ ಗವನರ್ಿಂಗ್ ಮಂಡಳಿಯ ಸದಸ್ಯೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಮಿಶನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಎಡಿಎಂಸಿ ಪ್ರಕಾಶನ್ ಪಾಲಾಯಿ ಸ್ವಾಗತಿಸಿ, ಪಿ.ಜೋಸೆಫ್ ವಂದಿಸಿದರು.
ಕೊರಗ ವಿಭಾಗಕ್ಕೊಳಪಟ್ಟ ಜನರ ನಗರೀಕರಣ ವ್ಯವಸ್ಥೆಗೆ ಹಾನಿ ಮಾಡಬಾರದು, ಅವರ ಪರಂಪರಾಗತ ಜೀವನಶೈಲಿಯಲ್ಲಿಯೇ ಬದುಕಿನ ಮಾರ್ಗಗಳನ್ನು ಕಲ್ಪಿಸಿ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು. ಪರಂಪರಾಗತ ನೇಯ್ಗೆಗಾರರಿಗೆ ಅಗತ್ಯವಿರುವ ಕಾಡುಬಳ್ಳಿಗಳನ್ನು ಲಭ್ಯಗೊಳಿಸುವುದಕ್ಕಾಗಿ ಬದಿಯಡ್ಕ ಗ್ರಾಮ ಪಂಚಾಯತ್ನ ಮಾಡತ್ತಡ್ಕದಲ್ಲಿ ಕಾಡುಬಳ್ಳಿಗಳ ಕೃಷಿ ಮಾಡುವುದಕ್ಕಾಗಿ ವ್ಯವಸ್ಥೆ ಕಲ್ಪಿಸಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಜಿಲ್ಲಾ ಆಡಳಿತ ತಯಾರಿಸಿದೆ. ಇದೇ ವೇಳೆ ನಡೆದ ತರಬೇತಿಯಲ್ಲಿ ವಿವಿಧ ವಿಷಯಗಳನ್ನು ಕೇಂದ್ರೀಕರಿಸಿ ಸ್ಟೇಟ್ ಪ್ರೋಗ್ರಾಂ ಸಹಾಯಕ ಪ್ರಬಂಧಕ ಪ್ರಭಾಕರನ್, ವ್ಯಕ್ತಿತ್ವ ವಿಕಸನ ತರಬೇತಿ ಕುರಿತು ನಿರ್ಮಲ್ಕುಮಾರ್ ಕಾರಡ್ಕ, ಶ್ರೀನಿ ಪಿ.ರಾಜನ್ ಮಾಸ್ತರ್, ಸುಕುಮಾರನ್, ಸಿ.ಹರಿದಾಸನ್, ಜೋಸೆಫ್ ಪಿ. ಮುಂತಾದವರು ತರಗತಿ ನಡೆಸಿದರು.





