ಕಾಸರಗೋಡು: ಜಿಲ್ಲೆಯ ಚಟ್ಟಂಚಾಲಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಗೈಲ್ ಪೈಪ್ಲೈನ್ನಿಂದ ನೇರವಾಗಿ ಇಂಧನ ಪಡೆದು ನೂತನ ಪವರ್ ಪ್ಲಾಂಟ್ ಸ್ಥಾಪಿಸಲಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ 2018-19ನೇ ವಾಷರ್ಿಕ ಯೋಜನೆಯ ಕಾರ್ಯಕಾರಿ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೂಲಕ ಮರು ಭೂಮಿಯಾಗಿರುವ ಚಟ್ಟಂಚಾಲು ಭೂ ಪ್ರದೇಶದ ಪ್ರಯೋಜನ ಪಡೆಯಲಾಗುವುದು ಎಂದು ನುಡಿದರು. 75.81 ಕೋಟಿ ರೂ. ಗಳನ್ನು 2018-19ನೇ ಯೋಜನೆಗಳಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ಉತ್ಪಾದನಾ ವಲಯಕ್ಕೆ 2.78 ಕೋಟಿ ರೂ., ಶುಚಿತ್ವ ವಲಯಕ್ಕೆ 2.23 ಕೋಟಿ ರೂ., ವಸತಿ ನಿಮರ್ಾಣ ವಲಯಕ್ಕೆ 7.16 ಕೋಟಿ ರೂ. ಹಾಗೂ ವೃದ್ಧರ ಕಲ್ಯಾಣ ಯೋಜನೆಗಾಗಿ 1.51 ಕೋಟಿ ರೂ. ಗಳನ್ನು ತೆಗೆದಿರಿಸಲಾಗಿದೆ ಎಂದರು.
ಕುಟುಂಬಶ್ರೀಗೆ ಸಂಬಂಧಿಸಿ ಹೋಮ್ ನಸರ್್ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯನ್ನು ಸಂಪೂರ್ಣ ಸ್ವಚ್ಛತಾ ನಗರವನ್ನಾಗಿಸುವ ಪ್ರಮುಖ ಉದ್ದೇಶದೊಂದಿಗೆ ಹಸಿರು ಕೇರಳ ಮಿಷನ್ಗೆ ಸಂಬಂಸಿ ವಿಶೇಷ ಯೋಜನೆಗಳನ್ನು ತಯಾರಿಸಲಾಗುವುದು. ಜಿಲ್ಲೆಯ 1500ರಷ್ಟು ಪರಿಶಿಷ್ಟ ವರ್ಗ ಕಾಲನಿಗಳಲ್ಲಿ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಿವರಿಸಿದರು.
ಎಲ್ಲ ಸೈಯರ್ ಸೆಕೆಂಡರಿ ಶಾಲೆಗಳಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪನೆ, ಮಹಿಳಾ ಕಲ್ಯಾಣ ಕಾಪರ್ೋರೇಶನ್ಗೆ ಸಂಬಂಸಿ ಹೆಚ್ಚಿನ ಯೋಜನೆಗಳ ಜಾರಿಗೆ ಕ್ರಮ, ಜಿಲ್ಲೆಯಲ್ಲಿ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಪ್ರಾಧಾನ್ಯತೆ, ಜಿಲ್ಲಾ ಆಸ್ಪತ್ರೆಯ ನವೀಕರಣಕ್ಕೆ ವಿಶೇಷ ಒತ್ತು, ವಿದ್ಯಾಥರ್ಿಗಳ ಕ್ರೀಡಾ ವಲಯದ ಪ್ರಯುಕ್ತ ಕುದಿಪ್ಪು ಯೋಜನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ತೀಮರ್ಾನಿಸಲಾಗಿದೆ. ಲೈಫ್ ಮನೆ ನಿಮರ್ಾಣ ಯೋಜನೆಯ ಅಂಗವಾಗಿ 7.92 ಕೋಟಿ ರೂ. ಗಳನ್ನು ಮೀಸಲಿಟ್ಟಿರುವುದಾಗಿ ಎ.ಜಿ.ಸಿ.ಬಶೀರ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿಯ ಅಧ್ಯಕ್ಷೆ ಫರೀದಾ ಝಕೀರ್ ಅಹಮ್ಮದ್, ನ್ಯಾಯವಾದಿ ಎ.ಪಿ.ಉಷಾ, ಜಿ.ಪಂ. ಸದಸ್ಯರಾದ ಇ.ಪದ್ಮಾವತಿ, ಕೆ.ಶ್ರೀಕಾಂತ್, ಕಾಂಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಕೆ.ಬಾಲಕೃಷ್ಣನ ಮತ್ತಿತರರು ಉಪಸ್ಥಿತರಿದ್ದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಹಷರ್ಾದ್ ವಕರ್ಾಡಿ ಸ್ವಾಗತಿಸಿ, ಶಾನವಾಸ್ ಪಾದೂರು ವಂದಿಸಿದರು.




