ಉಪ್ಪಳ: ಜೋಡುಕಲ್ಲು ಹಾಲುತ್ಪಾದಕ ಸಹಕಾರಿ ಸಂಘದ 2018-23ನೇ ಆಡಳಿತ ಮಂಡಳಿಗೆ ಸಹಕಾರ ಭಾರತಿಯ ಎಲ್ಲ 8 ಮಂದಿ ಅಭ್ಯಥರ್ಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಲಕೃಷ್ಣ ರೈ ಬಾನೊಟ್ಟು, ದಾಮೋದರ ಉಬಲರ್ೆ, ತಿಮ್ಮಪ್ಪ ಭಂಡಾರಿ ಬೊಳುವಾಯಿ, ಸನತ್ಕುಮಾರ್ ರೈ ಕಳ್ಳಿಗೆ, ಚಂದ್ರಕಾಂತ ಶೆಟ್ಟಿ ದೇರಂಬಳ, ವಾಣಿಶ್ರೀ ಬೇಕೂರು, ಲೀಲಾಲಕ್ಷ್ಮೀ ಕೋಡಿಬೈಲು, ನಿವೇದಿತಾ ಶೆಟ್ಟಿ ಮಡಂದೂರು ಆಡಳಿತ ಮಂಡಳಿಗೆ ಆಯ್ಕೆಯಾದರು.
ಜೋಡುಕಲ್ಲು ಹಾಲುತ್ಪಾದಕ ಸಹಕಾರಿ ಸಂಘದಲ್ಲಿ ಕಳೆದ 20 ವರ್ಷಗಳಿಂದ ಸಹಕಾರ ಭಾರತಿಯು ಸಮರ್ಥವಾಗಿ ಆಡಳಿತ ನಡೆಸುತ್ತಿದೆ. ಮಂಜೇಶ್ವರ ತಾಲೂಕಿನ ಪ್ರಸಿದ್ಧ ಹಾಲುತ್ಪಾದಕ ಸಹಕಾರಿ ಸಂಘ ಇದಾಗಿದ್ದು, ಅಭಿವೃದ್ಧಿಯ ಪಥದತ್ತ ಮುನ್ನಡೆಯುತ್ತಿದೆ. ಇದೇ ವೇಳೆ ಹೊಸ ಆಡಳಿತ ಮಂಡಳಿಯು ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜೋಡುಕಲ್ಲು ಹಾಲುತ್ಪಾದಕ ಸಹಕಾರಿ ಸಂಘದಲ್ಲಿ ಕಾರ್ಯರೂಪಕ್ಕೆ ತರಲು ರೂಪುರೇಷೆ ತಯಾರಿಸಿದೆ.




