ನವದೆಹಲಿ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಶುಕ್ರವಾರದವರೆಗೆ ಅರ್ಹ ಫಲಾನುಭವಿ ತಾಯಂದಿರಿಗೆ ಸಕರ್ಾರದಿಂದ 1,600 ಕೋಟಿ ರೂ. ವಗರ್ಾವಣೆಯಾಗಿದೆ ಎಂದು ಸೆಂಟರ್ ಫಾರ್ ಡಿಜಿಟಲ್ ಫೈನಾನ್ಶಿಯಲ್ ಇನ್ಕ್ಲೂಷನ್ (ಸಿಡಿಎಫ್ ಐ) ಹೇಳಿದೆ.
58 ಲಕ್ಷ ಮಹಿಳೆಯರಿಗೆ ನೇರ ಲಾಭಾಂಶ ವಗರ್ಾವಣೆ ಮೂಲಕ 16,04,66,63,000 ರೂ. ಗಳನ್ನು ವಗರ್ಾವಣೆ ಮಾಡಲಾಗಿದೆ. ಲಾಭರಹಿತ ಸಂಸ್ಥೆಯಾಗಿರುವ ಸಿಡಿಎಫ್ ಐ ಯು ಪಿಎಂಎಂವಿವೈ-ಸಿಎಎಸ್ (ಕಾಮನ್ ಅಪ್ಲಿಕೇಷನ್ ಸಾಫ್ಟ್ ವೇರ್) ಸಿಸ್ಟಮ್ ಮೂಲಕ ಈ ಹಣವನ್ನು ವಗರ್ಾವಣೆ ಮಾಡಿದೆ.
ಜನವರಿ 1, 2017ರಲ್ಲಿ ಪ್ರಾರಂಭವಾದ ಈ ಯೋಜನೆ ಮೂಲಕ ಮೊದಲ ಬಾರಿ ಗರ್ಭ ಧರಿಸುವ ಮಹಿಳೆಯರಿಗೆ ನೇರ ಲಾಭಾಂಶ ವಗರ್ಾವಣೆ (ಡಿಬಿಟಿ) ಮೂಲಕ ಮೂರು ಕಂತುಗಳಲ್ಲಿ 5000 ರೂ. ನಗದು ಉತ್ತೇಜನವನ್ನು ಒದಗಿಸುತ್ತದೆ.


