ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ಮಾತನಾಡಿದ್ದಾರೆ.
ಪ್ರಣಬ್ ಮುಖಜರ್ಿ ಫೌಂಡೇಶನ್ ಹಾಗೂ ಸೆಂಟರ್ ಫಾರ್ ರಿಸಚರ್್ ಫಾರ್ ರೂರಲ್ ಆಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ (ಸಿಆರ್ ಆರ್ ಐಡಿ) ಸಹಯೋಗದಲ್ಲಿ ನಡೆದ ಶಾಂತಿ ಹಾಗೂ ಸೌಹಾರ್ದತೆಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಣಬ್ ಮುಖಜರ್ಿ, ವಸುದೈವ ಕುಟುಂಬಕಂ ಎಂಬ ತತ್ವ ನೀಡಿದ ಭೂಮಿ ಇಂದು ಹೆಚ್ಚುತ್ತಿರುವ ಅಸಹಿಷ್ಣುತೆಗೆ ಸುದ್ದಿಯಾಗುತ್ತಿದೆ. ಬಹುತ್ವವವನ್ನು ಯಾವ ದೇಶದಲ್ಲಿ ಆಚರಿಸಲಾಗುತ್ತದೆಯೇ ಅಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಇರುವ ದೇಶಗಳಲ್ಲಿ ಸಂತೋಷ ಹೆಚ್ಚಿರುತ್ತದೆ. ಆಥರ್ಿಕ ಸ್ಥಿತಿಗತಿಗಳನ್ನೂ ಮೀರಿ, ಜನತೆ ಶಾಂತಿಯಿಂದ ಇದ್ದರೆ ಅಲ್ಲಿ ಸಂತೋಷವೂ ಇರುತ್ತದೆ ಎಂದು ಪ್ರಣಬ್ ಮುಖಜರ್ಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಗುರುನಾನಕ್ ಅವರ 549 ನೇ ಜನ್ಮದಿನಾಚರಣೆಯ ಅಂಗವಾಗಿ ಸಿಖ್ ಧರ್ಮ ಗುರುಗಳನ್ನು ಸ್ಮರಿಸಿರುವ ಪ್ರಣಬ್ ಮುಖಜರ್ಿ, ಗುರುನಾನತ್ ಅವರ ಶಾಂತಿ ಹಾಗೂ ಏಕತೆಯ ಸಂದೇಶವನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದಿದ್ದಾರೆ. ಸಂತಸ ಹಾಗೂ ಶಾಂತಿಯ ಕುರಿತು ಚಾಣಕ್ಯನ ಮಾತುಗಳನ್ನು ನೆನಪಿಸಿರುವ ಮಾಜಿ ರಾಷ್ಟ್ರಪತಿಗಳು, ಜನರ ಸಂತಸದಲ್ಲೇ ರಾಜನ ಸಂತಸವೂ ಅಡಗಿದೆ, ಋಗ್ವೇದದಲ್ಲಿ ಒಗ್ಗಟ್ಟಿನಿಂದ ಜೀವಿಸಬೇಕು, ಒಂದೇ ಧ್ವನಿಯಾಗಿರಬೇಕೆಂದು ಹೇಳಿದೆ ಎಂದು ಮುಖಜರ್ಿ ತಿಳಿಸಿದ್ದಾರೆ.


