ತಿರುವನಂತಪುರ: ಶಬರಿಮಲೆ ಘಟನೆಗೆ ಸಂಬಂಧಿಸಿ ಶುಕ್ರವಾರ ರಾತ್ರಿ ಹಠಾತ್ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಪೋಲೀಸರು ರಾತ್ರಿ ಬಂಧಿಸಿದರು. ಟೀಚರ್ ಅವರ ಬಂಧನದ ಕಾರಣ ಇಂದು ರಾಜ್ಯಾದ್ಯಂತ ಹರತಾಳ ಘೋಶಿಸಿದೆ.
ಶ್ರೀಶಬರಿಮಲೆ ಸನ್ನಿಧಾನಕ್ಕೆ ಶುಕ್ರವಾರ ಸಂಜೆ ಶಶಿಕಲಾ ಟೀಚರ್ ಅವರು ಶ್ರೀಸನ್ನಿಧಾನಕ್ಕೆ ತೆರಳಲು ಮಾಲಾಧಾರಣೆಯಾಗಿ ಹೊರಟಿದ್ದರು. ಈ ಮಧ್ಯೆ ಮರಕ್ಕೂಟ ತಲಪ್ಪುತ್ತಿರುವಂತೆ ಪೋಲೀಸರು ಯಾವುದೇ ಮುನ್ಸೂಚನೆ ನೀಡದೆ ಟೀಚರ್ ಅವರನ್ನು ಬಲವಂತವಾಗಿ ಬಂಧಿಸಿದರು. ಈ ಮಧ್ಯೆ ರಾಜ್ಯ ಹಿಂದುಳಿದ ವರ್ಗ-ಮೋಚರ್ಾದ ರಾಜ್ಯಾಧ್ಯಕ್ಷರನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ತಿಂಗಳುಗಳಿಂದ ಬುಗಿಲೆದ್ದಿರುವ ಶಬರಿಮಲೆ ವಿವಾದ ಸಂಬಂಧ ಸರಕಾರದ ನಡವಳಿಕೆ ವಿರೋಧಿಸಿ ಶಬರಿಮಲೆ ಭಕ್ತಜನ ಸಮಿತಿ ತೀವ್ರ ಹೋರಾಟ ನಡೆಸುತ್ತಿದೆ. ಪ್ರಗತಿಗಾಮಿ ಮಹಿಳೆಯರ ಮಲೆದರ್ಶನಕ್ಕೆ ಹಿಂದೂ ಐಕ್ಯವೇದಿ ನೇತಾರರು ಧಕ್ಕೆತರುತ್ತಿರುವುದು ನಿಯಂತ್ರಿಸಲು ಅದನ್ನು ಹತ್ತಿಕ್ಕುವ ಯತ್ನವಾಗಿ ಟೀಚರ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಯಲಾಗಿದೆ.
ಘಟನೆ ಖಂಡಿಸಿ ಇಂದು ರಾಜ್ಯಾದ್ಯಂತ ಹರತಾಳ ಘೋಶಿಸಲಾಗಿದೆ.





