ಮಂಜೇಶ್ವರ: ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಹಠಾತ್ ಬಂಧನದ ಕಾರಣ ಇಂದು ರಾಜ್ಯಾದ್ಯಂತ ಕರೆನೀಡಿದಹರತಾಳದ ಹಿನ್ನೆಲೆಯಲ್ಲಿ ಮಂಜೇಶ್ವರ ಎಸ್ ಎ ಟಿ ಶಾಲೆಯಲ್ಲಿ ನಡೆಯುತ್ತಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ದ ಮೂರನೇ ದಿನವಾದ ಇಂದಿನ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.
ಗುರುವಾರದಿಂದ ಆರಂಭಗೊಂಡಿದ್ದ ಮೂರು ದಿನಗಳ ಕಲೋತ್ಸವ ಇಂದು ಸಮಾರೋಪಗೊಳ್ಳಬೇಕಿತ್ತು. ಹರತಾಳದ ಕಾರಣ ಇಂದಿನ ಸ್ಪಧರ್ೆಗಳನ್ನು ನ.19 ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .

