ಪತ್ತನಂತಿಟ್ಟು: ಶಬರಿಮಲೆಯ ವಿದ್ಯಮಾನಗಳು ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ರಾಜಕೀಯ ಮತ್ತು ಸ್ವ ಪ್ರತಿಷ್ಠೆ-ಹಿತಾಸಕ್ತಿಗೆ ಬಲಿಯಾಗಿ ಬ್ರಹ್ಮಚಾರಿ ಸ್ವರೂಪಿ ಭಗವಾನ್ ಅಯ್ಯಪ್ಪನ ಪಾವಿತ್ರ್ಯೆಗೆ ತೀವ್ರ ಧಕ್ಕೆಯೊದಗುವ ಭೀತಿ ಹೆಚ್ಚಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಇಂದು(ಶನಿವಾರ) ಸಂಜೆಅಯ್ಯಪ್ಪ ದರ್ಶನಕ್ಕೆ ಇರುಮುಡಿ ಹೊತ್ತು ತೆರಳುತ್ತಿದ್ದಾಗ ಮುಂಜಾಗ್ರತಾ ಕ್ರಮದನ್ವಯ ಬಂಧಿಸಲಾಯಿತೆಂದು ತಿಳಿದುಬಂದಿದೆ.
ಶನಿವಾರ ಸಂಜೆ6.30 ರ ವೇಳೆಗೆ ಪಂಪೆಯನ್ನು ದಾಟಿ ಮುಂದೊತ್ತಿರುವಂತೆ ಜಿಲ್ಲಾ ಪೋಲೀಸ್ ವರಿಷ್ಠರ ಸಹಿತ ಪೋಲೀಸ್ ತಂಡ ಗಲಭೆಯ ಮುನ್ನೆಚ್ಚರಿಕೆಯೊಂದಿಗೆ ಬಂಧಿಸಿ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.ಜೊತೆಗೆಇತರ ಐವರನ್ನೂ ಬಂಧಿಸಲಾಗಿದೆ.
ಈ ಮಧ್ಯೆ ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು 8 ಗಂಟೆಯ ವೇಳೆಗೆ ತಿರುವನಂತಪುರದರಾಜ್ಯ ಸೆಕ್ರೆಟರಿಯೇಟ್ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ತೀವ್ರ ಸಂಘರ್ಷ ಸ್ಥಿತಿ ನಿಮರ್ಾಣವಾಗಿದೆ, ಗೊಂದಲ ಇದೀಗಲೂ ಮುಂದುವರಿಯುತ್ತಿದೆ.
ಭಾನುವಾರ ರಾಜ್ಯ ವ್ಯಾಪಕ ಬಿಜೆಪಿ ಪ್ರತಿಭಟನಾ ದಿನವಾಗಿ ಘೋಶಿಸಿದ್ದು, ಎಲ್ಲಾ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಪ್ರತಿಭಟನೆ ನಡೆಯಲಿದೆ. ಜೊತೆಗೆ ಬೆಳಿಗ್ಗೆ 9.30 ರಿಂದ 10.30ರ ವರೆಗೆ ಒಂದು ಗಂಟೆಗಳ ಕಾಲ ವಾಹನ ಸಂಚಾರ ಮೊಟಕು ನಡೆಯಲಿದೆಎಮದು ಮೂಲಗಳಿಂದ ತಿಳಿದುಬಂದಿದೆ .





