ಕೊಚ್ಚಿ: ಅತ್ತ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಇತ್ತ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ದೇವಸ್ವಂ ಮಂಡಳಿ ಸುಪ್ರೀಂ ಕೋಟರ್್ ಆದೇಶ ಪಾಲನೆಗೆ ಸಮಯಬೇಕಿದೆ ಎಂದು ಹೇಳಿದೆ.
ಮಹಿಳಾ ಪ್ರವೇಶದ ವಿರುದ್ಧ ಹೆಚ್ಚುತ್ತಿರುವ ಜನಾಕ್ರೋಶದ ಹಿನ್ನಲೆಯಲ್ಲಿ ದೇವಸ್ವಂ ಮಂಡಳಿ ಈ ನಿಧರ್ಾರಕ್ಕೆ ಬಂದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಕೂಡ ಒಮ್ಮತದ ತೀಮರ್ಾನಕ್ಕೆ ಬರದೇ ವಿಫಲವಾಗಿತ್ತು. ಇದೇ ಕಾರಣಕ್ಕೆ ಕೇರಳ ಸಕರ್ಾರ ಸುಪ್ರೀಂ ಕೋಟರ್್ ಆದೇಶ ಪಾಲನೆಗಾಗಿ ಸಮಯಾವಕಾಶ ಕೇಳುವ ಸಾಧ್ಯತೆ ಇದೆ.
ಅಲ್ಲದೆ ಶಬರಿಮಲೆ ಯಾತ್ರೆ ಆರಂಭವಾಗಿರುವುದರಿಂದ, ಎರಡು ತಿಂಗಳ ಯಾತ್ರಾವಧಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಕೇರಳ ಸಕರ್ಾರದ ಮುಂದಿರುವ ದೊಡ್ಡ ಸವಾಲಾಗಿದೆ. ಅದರ ನಡುವೆ ಮಹಿಳೆಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವುದರಿಂದ ಖಂಡಿತಾ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕೇರಳ ಸಕರ್ಾರ ಈ ವಿಚಾರದಲ್ಲಿ ಹಿಂದಡಿ ಇಟ್ಟಿದೆ ಎನ್ನಲಾಗುತ್ತಿದೆ.





