ಸ್ಯಾನ್ ಫ್ರಾನ್ಸಿಸ್ಕೋ: ಹೆಚ್ಚಿನ ಪ್ರಮಾಣದಲ್ಲಿ ಅಪರಿಚಿತರಿಗೆ ಬದಲಿ ಆನ್ ಲೈನ್ ನಲ್ಲಿ ಪರಿಚಯವಾಗುವ ಜನರಿಂದ ಹೆಚ್ಚು ಮಂದಿ ದೊಡ್ಡ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಮೈಕ್ರೋಸಾಫ್ಟ್ ಸಂಸ್ಥೆಯ ಅದ್ಯಯನ ವರದಿ ತಿಳಿಸಿದೆ.
ಹೆಚ್ಚಿನ ಜನರು ಆನ್ ಲೈನ್ ನಲ್ಲಿ ಸಂಪರ್ಕ ಮಾಡುವವರಿಂಡ ತೊಂದರೆಗೊಳಗಾಗುತ್ತಿದ್ದು ಇದು ಕೆಲವೊಮ್ಮೆ ಕೌಟುಂಬಿಕ, ಸಾಮಾಜಿಕ ಮಟ್ಟದಲ್ಲಿ ವ್ಯಕ್ತಿಯನ್ನು ಸಿಲುಕಿಸುತ್ತದೆ.
ಶೇ. 60ರಷ್ಟು ಮಂದಿ ಆನ್ ಲೈನ್ ನಲ್ಲಿ ಪರಿಚಯವಾಗುವ ವ್ಯಕ್ತಿಗಳಿಂದ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾರೆ ಎಂದು ಅದ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಇದರಲ್ಲಿ ಶೇ.28 ಮಂದಿಮಾತ್ರ ಆನ್ ಲೈನ್ ನಲ್ಲಿರುವ ಕುಟುಂಬ, ಸ್ನೇಹಿತರಿಂದ ಅಪಾಯಕ್ಕೆ ಸ್ಇಕ್ಕಿದ್ದರೆಂದು ಹೇಳಲಾಗಿದೆ.
ನಿಜ ಜೀವನದಲ್ಲಿ ತಮನ್ನು ಭೇಟಿಯಾಗುವ ಅಪರಿಚಿತರಿಂದ ಮೋಸಗೊಳ್ಳುವುದಕ್ಕೆ ದುಪ್ಪಟ್ಟು ಸಂಖ್ಯೆಯಲ್ಲಿ ಆನ್ ಲೈನ್ ಮೂಲಕ ಪರಿಚಯವಾದವರಿಒಂದ ಮೋಸಕ್ಕೆ, ಕಷ್ಟಕ್ಕೆ ಒಳಗಾಗುವವರು ಹೆಚ್ಚಿದ್ದಾರೆ ಎಂದು ಮೈಕ್ರೋಸಾಫ್ಟ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಪ್ರಕಟಿಸಿರುವ ವರದಿಯಲ್ಲಿ ಹೇಳಿದೆ.
ತಮ್ಮ ವೈಯಕ್ತಿಕ ಗುಣಲಕ್ಷಣಗಳಾದ ಲಿಂಗ, ವಯಸ್ಸು ಮತ್ತು ದೈಹಿಕ ಸ್ವರೂಪದ ಕಾರಣದಿಂದಾಗಿ ಜನರು ಈ ಕಷ್ಟಗಳ್ಗೆ ಸಿಕ್ಕುತ್ತಾರೆ,. 2017ರ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದರೆ ಕುಟುಂಬ, ಸ್ನೇಹಿತರು ಮತ್ತು ಪರಿಚಯಸ್ಥರಿಂದ ಋಣಾತ್ಮಕ ಅನುಭವ ಪಡೆದವರ ಸಂಖ್ಯೆ ಕ್ರಮವಾಗಿ ಶೇ. 4.7ಮತ್ತು 2ರಷ್ಟಿದೆ.
ಇನ್ನು 2018ರಲ್ಲಿ ಇದಕ್ಕೆ ಹೊಸ ವಗರ್ೀಕರಣವೊಂದು ಸೇರಿದ್ದು ಅದು ಸಹೋದ್ಯೋಗಿಗಳು ಎಂದಾಗಿದೆ, ಆನ್ ಲೈನ್ ನಲ್ಲಿ ತಮ್ಮ ಸಹೋದ್ಯೋಗಿಗಳಿಂದ ಅಹಿತಕರ ಅನುಭವ ಪಡೆದವರ ಸಂಖ್ಯೆ ಶೇ. 9ರಷ್ಟಿದೆ.
ಹೆಸರಿತ್ಟು ಕರೆಯುವುದು, ಉದ್ದೇಶಪೂರ್ವಕವಾದ ಮುಜುಗರಕ್ಕೀಡು ಮಾಡುವುದು, ಇದು ಈ ವರ್ಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.10ರ ಪೈಕಿ ನಾಲ್ಕು ಜನತರ್ಿಗೆ ಇಂತಹಾ ಅನುಭವವಾಗಿದೆ.ಇಷ್ಟವಿಲ್ಲದ ಲೈಂಗಿಕ ಸಂದೇಶ ರವಾನಿ, ಸ್ವೀಕಾರ ಸಹ ಇದೇ ವಿಭಾಗದಲ್ಲಿ ಬರುತ್ತಿದ್ದು 10ರಲ್ಲಿ ನಾಲ್ವರಿಗೆ ಣಯ ಸಂಬಂಧವನ್ನು ಪ್ರಾರಂಭಿಸಲು ಪುನರಾವತರ್ಿತ ಸಂದೇಶ ಬರುತ್ತಿರುತ್ತದೆ.
ಈ ಸಂಶೋಧನೆಗಳು ಭಾರತ ಮತ್ತು ಕೆನಡಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಟಕರ್ಿ, ಯುಕೆ, ಯುಎಸ್ ಮತ್ತು ವಿಯೆಟ್ನಾಮ್ ಸೇರಿದಂತೆ ಇತರ 22 ದೇಶಗಳಲ್ಲಿ ಹದಿಹರೆಯದವರು ಮತ್ತು ವಯಸ್ಕರ ಜೀವನ ದೃಷ್ಟಿಕೋನ ಮತ್ತು ಗ್ರಹಿಕೆಗಳನ್ನು ಆಧರಿಸಿದೆ.





