ಕಾಸರಗೋಡು: ತುತರ್ು ಪರಿಸ್ಥಿತಿ ಹೋರಾಟಗಾರರಿಗೆ ಮತ್ತು ಸಂತ್ರಸ್ಥರಿಗೆ ದೇಶದಾದ್ಯಂತ 11 ರಾಜ್ಯದ ಬಿ.ಜೆ.ಪಿ.ಆಡಳಿತ ನಡೆಸುವ ಸರಕಾರಗಳು ಪಿಂಚಣಿ ಇನ್ನಿತರ ಸವಲತ್ತುಗಳನ್ನು ವಿತರಿಸುತ್ತಿದೆ.ಆದರೆ ಕೇರಳ ಕನರ್ಾಟಕ ರಾಜ್ಯಗಳ ಸಹಿತ ಇತರ ವಿಪಕ್ಷ ಆಡಳಿತದ ರಾಜ್ಯಗಳು ಇನ್ನೂ ಪಿಂಚಣಿ ನೀಡದೆ ತುತರ್ು ಪರಿಸ್ಥಿತಿ ಹೋರಾಟಗಾರರನ್ನು ಅವಣಿಸುತ್ತಿರುವುದಾಗಿ ತುತರ್ು ಪರಿಸ್ಥಿತಿ ಹೋರಾಟಗಾರರ ಸಂಘಟನೆಯ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಆರ್.ಮೋಹನ್ಜೀ ಆರೋಪಿಸಿದರು.
ಕಾಸರಗೋಡು ಟೌನ್ ಬ್ಯಾಂಕ್ ಸಭಾ ಭವನದಲ್ಲಿ ಜರಗಿದ ತುತರ್ು ಪರಿಸ್ಥಿತಿ ಹೋರಾಟಗಾರರ ಸಂಘಟನೆಯ ಕಾಸರಗೋಡು ಜಿಲ್ಲಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುತರ್ು ಪರಿಸ್ಥಿತಿ ಹೋರಾಟವನ್ನು ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮವಾಗಿ ಕೇಂದ್ರ ಸರಕಾರ ಪರಿಗಣಿಸಬೇಕು,ಹೋರಾಟಗಾರರಿಗೆ ಎಲ್ಲಾ ಅರ್ಹ ಸವಲತ್ತುಗಳನ್ನು ನೀಡಲು ಕೇಂದ್ರ ಸರಕಾರದ ಗಮನ ಸೆಳೆಯಲು ಮುಂದಿನ ಲೋಕಸಭಾ ಅಧಿವೇಶನ ಕಾಲದಲ್ಲಿ ದಿಲ್ಲಿಯಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಯಲಿರುವುದಾಗಿ ಅವರು ತಿಳಿಸಿದರು.ಮುಂದಿನ 2019 ಫೆ.3ರಂದು ಕೇರಳದ ಆಲುವಾದಲ್ಲಿ ತುತರ್ು ಪರಿಸ್ಥಿತಿ ಹೋರಾಟಗಾರರ ಕುಟುಂಬ ಸಂಗಮ ನಡೆಯಲಿರುವುದು.ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುತರ್ು ಪರಿಸ್ಥಿತಿ ಹೋರಾಟಗಾರರು ಮತ್ತು ಹೋರಾಟಗಾರರ ಮನೆಯವರು ಭಾಗವಹಿಸಬೇಕೆಂಬುದಾಗಿ ಅವರು ಕರೆ ನೀಡಿದರು.
ತುತರ್ು ಪರಿಸ್ಥಿತಿ ಹೋರಾಟಗಾರರ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ರವೀಂದ್ರನ್ ಅಧ್ಯಕ್ಷತೆ ವಹಿಸಿದರು. ಸಂಘಟನೆಯ ರಾಜ್ಯ ಕೋಶಾಧಿಕಾರಿ ಕುಳತ್ತೇರಿ ವಿಜಯನ್,ಜಿಲ್ಲಾ ಕಾರ್ಯದಶರ್ಿ ಕೆ.ಕರುಣಾಕರನ್ ಉಪಸ್ಥಿತರಿದ್ದು ಮಾತನಾಡಿದರು.ಜಿಲ್ಲಾ ಕೋಶಾಧಿಕಾರಿ ಮಹಾಬಲ ರೈ ಸ್ವಾಗತಿಸಿ, ಕಾರ್ಯದಶರ್ಿ ಅಚ್ಯುತ ಚೇವಾರ್ ವಂದಿಸಿದರು.


