ಮನ್'ಕಿಬಾತ್ ಸಕರ್ಾರದ ದನಿಯಲ್ಲ, ಭಾರತದ ದನಿ: ಪ್ರಧಾನಿ ಮೋದಿ
0
ನವೆಂಬರ್ 25, 2018
ನವದೆಹಲಿ: ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಸಕರ್ಾರದ ದನಿಯಲ್ಲ, ಭಾರತದ ದನಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದರು.
ಮೋದಿಯವರ ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮ ನಿನ್ನೆಗೆ 50ನೇ ಕಂತುಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಮನ್ ಕಿ ಬಾತ್'ನ ಪ್ರಯಾಣವನ್ನು ಪ್ರಧಾನಿ ಮೋದಿಯವರು ನೆನೆದಿದ್ದಾರೆ.
ಮನ್ ಕಿ ಬಾತ್ ಕೇವಲ ಸಕರ್ಾರದ ದನಿಯಲ್ಲ. ಇದು ಭಾರತದ ದನಿಯಾಗಿದೆ. ಭಾರತದ ಆಕಾಂಕ್ಷೆಗಳ ಬಗ್ಗೆ ಇದು ಮಾತನಾಡುತ್ತದೆ. ಮನ್ ಕಿ ಬಾತ್ ಬಗ್ಗೆ ಕೆಲ ಯುವ ಸ್ನೇಹಿತರು ಅಧ್ಯಯನ ನಡೆಸುಲು ಯತ್ನಿಸಿದ್ದಾರೆ. ಮನ್ ಕಿ ಬಾತ್ ನಲ್ಲಿ ಆಡಿದ್ದ ಮಾತುಗಳನ್ನು ಲೆಕ್ಕಾಚಾರ ಮಾಡಿದ್ದಾರೆ. ಅಧ್ಯಯನದಲ್ಲಿ ಕಾರ್ಯಕ್ರಮ ರಾಜಕೀಯವಲ್ಲದ ವಿಚಾರಗಳ ಬಗ್ಗೆಯೇ ಹೆಚ್ಚು ಮಾತನಾಡಿರುವುದನ್ನು ವರದಿಯಲ್ಲಿ ತಿಳಿಸಿದೆ ಎಂದು ಹೇಳಿದರು.
ಜನರ ಮನಸ್ಸನ್ನು ತಲುಪಲು ರೇಡಿಯೋ ಅತ್ಯುತ್ತಮವಾದದ್ದು ಎಂದು ನಾನು ತಿಳಿಸಿದ್ದೆ. ನಾನು ಪ್ರಧಾನಮಂತ್ರಿಯಾದಾಗ ದೇಶವನ್ನು ಒಗ್ಗೂಡಿಸಲು ವೇದಿಕೆ ಬೇಕಿತ್ತು. ಹೀಗಾಗಿ ಮನ್ ಕಿ ಬಾತ್ ಆರಂಭಿಸಿದ್ದೆ. ಮನ್ ಕಿ ಬಾತ್ ಕಾರ್ಯಕ್ರಮ ಕುರಿತಂತೆ ಆಲ್ ಇಂಡಿಯಾ ರೇಡಿಯಾ ಸಮೀಕ್ಷೆ ನಡೆಸಿದ್ದು, ಕಾರ್ಯಕ್ರಮವನ್ನು ಪ್ರತೀನಿತ್ಯ ಶೇ.70 ರಷ್ಟು ಕೇಳುತ್ತಿರುವುದು ತಿಳಿದುಬಂದಿದೆ. ಟಿವಿ. ಎಫ್ಎಂ ರೇಡಿಯೋ, ಮೊಬೈಲ್, ಇಂಟನರ್ೆಟ್, ಫೇಸ್ ಬುಕ್ ಮೂಲಗ ಜನರು ಸಂಪರ್ಕವನ್ನು ಹೊಂದುತ್ತಿದ್ದಾರೆ. ಮನ್ ಕಿ ಬಾತ್ ನಿಂದ ನಮ್ಮ ಸಮಾಜದಲ್ಲಿ ಧನಾತ್ಮಕ ಪರಿಣಾಮಗಳು ಬೀರುತ್ತಿವೆ ಎಂದು ಜನರು ನಂಬಿದ್ದಾರೆ. ಮನ್ ಕಿ ಬಾತ್ ನಿಂದ ಹಲವಾರು ವಿಚಾರಗಳ ಬಗ್ಗೆ ಜನರು ಚಚರ್ೆ ನಡೆಸಲು ಆರಂಭಿಸಿದ್ದಾರೆ.
ಮನ್ ಕಿ ಬಾತ್ ನಲ್ಲಿ ಆಡಿದ ವಿಚಾರಗಳ ಬಗ್ಗೆ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳಿಗೆ ಧನ್ಯವಾದಗಳು. ಮಾಧ್ಯಮಗಳ ಬಗ್ಗೆ ಯಾವೊಬ್ಬ ರಾಜಕೀಯ ನಾಯಕನೂ ಕೂಡ ಸಂತೋಷ ಪಡುವುದಿಲ್ಲ. ಅವರಿಗೆ ಮಾಧ್ಯಮಗಳೂ ಸೂಕ್ತ ರೀತಿಯ ಸುದ್ದಿಗಳನ್ನು ನೀಡುವುದಿಲ್ಲ ಎಂಬು ನಂಬುತ್ತಾರೆ. ಸ್ವಚ್ಛತೆ, ರಸ್ತೆ ಸುರಕ್ಷತೆ, ಮಾದಕ ವ್ಯಸನ ಮುಕ್ತ ಭಾರತ ಕುರಿತಂತೆ ಮಾಧ್ಯಮಗಳ ಪರಿಶ್ರಮ, ಪ್ರಚಾರಗಳು ಅತ್ಯುತ್ತಮವಾಗಿವೆ ಎಂದು ತಿಳಿಸಿದ್ದಾರೆ.
ಸಕರ್ಾರ ಅತ್ಯಂತ ಮುಖ್ಯವಾದ ನಿಧರ್ಾರವೊಂದನ್ನು ತೆಗೆದುಕೊಂಡಿದೆ. ಕತರ್ಾಪರ್ುರ ಕಾರಿಡಾರ್ ತೆರೆಯುವ ಮೂಲಕ ಪಾಕಿಸ್ತಾನದ ಕತರ್ಾಪರ್ುರಕ್ಕೆ ಜನರು ಸುಲಭವಾಗಿ ಹೋಗಲು, ಗುರು ನಾನಕ್ ದೇವ್ ಅವರ ಪಾವಿತ್ರ್ಯ ಸ್ಥಳಕ್ಕೆ ಭೇಟಿ ನೀಡಲು ಅನುವು ಮಾಡಿಕೊಟ್ಟಿದೆ ಎಂದಿದ್ದಾರೆ.


