ಪೆರ್ಲ:ಕೇರಳದ ದೇವಾಲಯಗಳ ಆಚರಣೆ, ಅನುಷ್ಠಾನ, ಧಾಮರ್ಿಕ ಚೌಕಟ್ಟಿನೊಳಗೆ ನ್ಯಾಯಾಂಗ, ಸರಕಾರದ ಹಸ್ತಕ್ಷೇಪ, ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಟುಕುಕ್ಕೆ ಸುಬ್ರಾಯ ದೇವಳ ಪರಿಸರದಲ್ಲಿ ಇಂದು ಬೆಳಿಗ್ಗೆ 10ಕ್ಕೆ ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ರಚನೆ ನಡೆಯಲಿದೆ.
ಬ್ರಹ್ಮಶ್ರೀ ವೇದಮೂತರ್ಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ದೀಪ ಪ್ರಜ್ವಲನೆಗೈದು ಶುಭಾಶೀವರ್ಾದ ನೀಡುವರು. ಬ್ರಹ್ಮಶ್ರೀ ವೇ.ಮೂ.ರವೀಶ್ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣ ಮಾಡುವರು. ಕಾಟುಕುಕ್ಕೆ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕಾತರ್ಿಕ್ ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧ್ಯಕ್ಷ ಅಪ್ಪಯ್ಯ ನಾಯ್ಕ್ ಮಧೂರು, ಕಾರ್ಯದಶರ್ಿ ರಮೇಶನ್ ಕಾಂಞಂಗಾಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಸಿ.ಸಂಜೀವ ರೈ ಕೆಂಗಣಾಜೆ, ಸಚ್ಚಿದಾನಂದ ಖಂಡೇರಿ, ವಿಷ್ಣುಪ್ರಕಾಶ್ ಖಂಡೇರಿ ಶುಭ ಹಾರೈಸುವರು




