ಕಾಸರಗೋಡು: ದಕ್ಷಿಣ ಕನರ್ಾಟಕ ಹಾಗೂ ಉತ್ತರ ಕೇರಳದ ಕನಸಿನ ಯೋಜನೆಯಾದ ಕಾಞಂಗಾಡು-ಪಾಣತ್ತೂರು-ಕಾಣಿಯೂರು ರೈಲುಮಾರ್ಗ ಕಾಯರ್ಾರಂಭಗೊಳಿಸಲು ಕಾಞಂಗಾಡು ಕ್ರಿಯಾಸಮಿತಿ ಪದಾಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಕನರ್ಾಟಕ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನನ್ನು ಭೇಟಿ ಮಾಡಿದ್ದರು.
ಸಚಿವ, ಸಂಸದ ಹಾಗೂ ಜಿಲ್ಲೆಯ ಇತರ ಜನಪ್ರತಿನಿಧಿಗಳನ್ನು ಹೊರಗಿಟ್ಟು ಕ್ರಿಯಾ ಸಮಿತಿ ಪದಾಧಿಕಾರಿಗಳು ನಡೆಸಿದ ಸಿಎಂ ಭೇಟಿ ಸಂಸದ ಪಿ. ಕರುಣಾಕರನ್ ಮೊದಲಾದ ಜನಪ್ರತಿನಿಧಿಗಳಲ್ಲಿ ನಿರಾಸೆಯುಂಟು ಮಾಡಿಸಿದೆ.
91 ಕಿ.ಮೀ. ದೀರ್ಘವಿರುವ ನಿದರ್ಿಷ್ಟ ಯೋಜನೆಗೆ ಕೇರಳದ ಮೂಲಕ ಹಾದು ಹೋಗುವ 45 ಕಿಲೋಮೀಟರ್ ಹೆದ್ದಾರಿಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿ ನೀಡಲು, ಯೋಜನೆಯ ಅರ್ಧ ಖಚರ್ು ಮಂಜೂರುಗೊಳಿಸಲು ಕೇರಳ ರಾಜ್ಯ ಸಚಿವ ಸಂಪುಟ ಸಭೆ ತೀಮರ್ಾನಿಸಿದೆ. ಕನರ್ಾಟಕ ಸರಕಾರ ಕೂಡ ಕೇರಳಕ್ಕೆ ಸಮಾನವಾದ ತೀಮರ್ಾನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಸಿ. ಯೂಸಫ್ಹಾಜಿ, ಟಿ. ಮುಹಮ್ಮದ್ ಅಸ್ಲಾಂ, ಎ. ಹಮೀದ್ ಹಾಜಿ, ಎಂ. ಬಿ. ಎಂ. ಅಶ್ರಫ್, ಸೂರ್ಯನಾರಾಯಣ ಭಟ್ ಕನರ್ಾಟಕ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು.
ಕನರ್ಾಟಕದ ಜೆಡಿಎಸ್, ಕಾಂಗ್ರೆಸ್ ಮುಖಂಡರು ಅವರೊಂದಿಗಿದ್ದರು. ಆದರೆ ಸಂಸದ ಪಿ. ಕರುಣಾಕರನ್ ಅವರನ್ನೊಳಗೊಂಡ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಗಳಲ್ಲಿ ಸಹಭಾಗಿತ್ವ ಖಾತರಿ ಪಡಿಸದೆ ಕ್ರಿಯಾ ಸಮಿತಿಯ ಹೆಸರಿನಲ್ಲಿ ಕೆಲವರು ಕಾಣಿಯೂರು ರೈಲುಮಾರ್ಗವನ್ನು ಹೈಜಾಕ್ ಮಾಡುತ್ತಿರುವುದಾಗಿ ಒಂದು ಗುಂಪು ದೂರಿದೆ.




