ಮಂಜೇಶ್ವರ: ಶಾಂತಿ ದೂತ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮಾದಿನಾಚರಣೆಯನ್ನು ಮಂಜೇಶ್ವರದೆಲ್ಲೆಡೆ ಮುಸ್ಲಿಂ ಬಾಂಧವರು ಭಕ್ತಿ ಶ್ರದ್ದೆಯಿಂದ ಮತ್ತು ಸಂಭ್ರಮ ಸಡಗರದಿಂದ ಮಂಗಳವಾರ ಆಚರಿಸಿದರು.
ಜಿಲ್ಲೆಯ ಪ್ರಾಚೀನ ಮಸಿದಿಗಳಲ್ಲೊಂದಾದ ಉದ್ಯಾವರ ಖಿದ್ಮತುಲ್ ಇಸ್ಲಾಂ ಸಮಿತಿ ಸಾವಿರ ಜಮಾಹತ್ ವತಿಯಿಂದ ಬೃಹತ್ ಮಿಲಾದ್ ರ್ಯಾಲಿ ಹಾಗೂ ನೆಬಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
13 ಮೊಹ್ಹಲಾಗಳ ಸುಮಾರು 2500 ರಷ್ಟು ಮದ್ರಸ ವಿದ್ಯಾಥರ್ಿಗಳು ಕೇಂದ್ರ ಜಮಾಅತ್ ನ ಅಂಗಣದಲ್ಲಿ ಜೊತೆಯಾಗಿ ಮಿಲಾದ್ ರ್ಯಾಲಿಯನ್ನು ಆರಂಭಿಸಲಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ರ್ಯಾಲಿ ತೂಮಿನಾಡು ಕಟ್ಟೆಯ ತನಕ ಸಾಗಿತು. ಎಲ್ಲಾ ವರ್ಷವೂ ಕುಂಜತ್ತೂರಿನಿಂದ ಹಿಂತಿರುಗುತಿದ್ದ ರ್ಯಾಲಿಯನ್ನು ಈ ವರ್ಷ ತೂಮಿನಾಡು ತನಕ ವಿಸ್ತರಿಸಲಾಗಿತ್ತು. ಈ ನಿಟ್ಟಿನಲ್ಲಿ ತೂಮಿನಾಡಿನ ಯುವಕರು ಸಂಭ್ರಮದಿಂದ ಜಾಥಾಕ್ಕೆ ಸ್ವಾಗತ ನೀಡಿ ವಿದ್ಯಾಥರ್ಿಗಳಿದೆ ತಂಪುಪಾನೀಯ ಹಾಗೂ ಸಿಹಿ ತಿಂಡಿಗಳನ್ನು ವಿತರಿಸಿದರು. ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಜಾಥಾಕೆ ಸ್ವಾಗತವನ್ನು ನೀಡಲಾಯಿತು.
ಸಾವಿರ ಜಮಾಅತ್ ಅಧ್ಯಕ್ಷ ಸೂಫಿ ಹಾಜಿ, ಕಾಯರ್ುದಶರ್ಿ ಎ ಕೆ ಮೊಯ್ದೀನ್ ಹಾಜಿ, ಬಾವ ಹಾಜಿ, ಅಬೂಬಕ್ಕರ್ ಮಾಹಿನ್, ಖಾದರ್ ಫಾರೂಕ್ ಸಹಿತ ಪ್ರಮುಖರು ರ್ಯಾಲಿಯ ನೇತೃತ್ವ ವಹಿಸಿದ್ದರು. ಬಳಿಕ ಉದ್ಯಾವರ ಜುಮಾ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ವಿದ್ಯಾಥರ್ಿಗಳ ಕಾರ್ಯಕ್ರಮ ನಡೆಯಿತು.





