ಕುಂಬಳೆ: ಹಿಂದೂ ಐಕ್ಯ ವೇದಿಕೆಯ ಕೇರಳ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಪಟ್ಟಾಂಬಿ ಹಾಗೂ ಹಿಂದೂ ಸಂಘಟನೆಯ ನೇತಾರರನ್ನು ಬಂಧಿಸಿದ ರಾಜ್ಯ ಎಡರಂಗ ಸರಕಾರದ ವಿರುದ್ಧ ಕುಂಬಳೆಯಲ್ಲಿ ಹಿಂದೂ ಐಕ್ಯ ವೇದಿಕೆ ಹಾಗೂ ಸಂಘ ಪರಿಹಾರದಿಂದ ಪ್ರತಿಭಟನಾ ಮೆರವಣಿಗೆ ಸೋಮವಾರ ನಡೆಯಿತು.
ಬಳಿಕ ನಡೆದ ಸಭೆಯಲ್ಲಿ ಕುಂಬಳೆ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಕೆ.ಶಂಕರ್ ಆಳ್ವ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ಮಾತನಾಡಿದರು. ನೇತಾರರಾದ ವಿನಯ್ ಆಳ್ವ, ಸಂದೀಪ್ ಕಾಲರ್ೆ ಸುಮಿತ್ರಾ, ದಿನೇಶ್, ಶ್ರೀಧರ್ ಗುರುಸ್ವಾಮಿ, ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಜನಪ್ರತಿನಿಧಿಗಳಾದ ಕೆ. ರಮೇಶ್ ಭಟ್, ಕೆ.ಸುಧಾಕರ ಕಾಮತ್, ಹರೀಶ್ ಗಟ್ಟಿ , ಕೆ.ಸುಜಿತ್ ರೈ , ಪುಷ್ಪಲತಾ ಸಹಿತ ಅಯ್ಯಪ್ಪ ಭಕ್ತರು, ಮಹಿಳೆಯರು ಭಾಗವಹಿಸಿದ್ದರು. ಸುರೇಶ ಶಾಂತಿಪಳ್ಳ ಸ್ವಾಗತಿಸಿ, ವಸಂತಿ ವಂದಿಸಿದರು.





