ಉಪ್ಪಳ: ಸಂಘ ಪರಿವಾರದ ನಾಯಕರನ್ನು ಬಂಧಿಸಿ ಕೇರಳದಲ್ಲಿ ಅಯ್ಯಪ್ಪ ಭಕ್ತರನ್ನು, ಶಬರಿಮಲೆಯನ್ನು ನಾಶ ಗೊಳಿಸುವ ಎಡರಂಗ ಸರಕಾರದ ಹುನ್ನಾರವನ್ನು ಹಿಂದೂ ಸಮುದಾಯ ಸಂಘಟಿತವಾಗಿ ಎದುರಿಸಿ ಆಚಾರ ಅನುಷ್ಠಾನಗಳ ಸಂರಕ್ಷಣೆ ಮಾಡಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದಶರ್ಿ ಆದಶರ್್ ಬಿಎಂ ತಿಳಿಸಿದರು.
ಮಂಗಲ್ಪಾಡಿ ಪಂಚಾಯತ್ ಬಿಜೆಪಿ ಮತ್ತು ಅಯ್ಯಪ್ಪ ಕರ್ಮ ಸಮಿತಿ ಸೋಮವಾರ ಮುಂಜಾನೆ ಸಂಘಟಿಸಿದ ಪಂಜಿನ ಮೆರವಣಿಗೆ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು.
ಕೇರಳ ಸರಕಾರದ ಪೋಲಿಸ್ ನಡವಳಿಕೆ ಸರಕಾರದ ಕೈಗೊಂಬೆ ಎನ್ನುವುದರ ಸ್ಪಷ್ಟನೆಯಾಗಿದೆ. ನಂಬಿಕೆ, ವಿಶ್ವಾಸಗಳನ್ನು ಹಾನಿಗೊಳಿಸುವ ಯಾವ ಶಕ್ತಿಯನ್ನೂ ಸಮರ್ಪಕವಾಗಿ ಎದುರಿಸಲಾಗುವುದು ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಹಿಂದುಗಳನ್ನು ವಿಭಜಿಸುವ ಎಡರಂಗದ ಕ್ರಮ ಖಂಡನೀಯ ಎಂದು ಹೇಳಿದರು. ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, ಬಾಲಕೃಷ್ಣ ಅಂಬಾರ್ ಮಾತನಾಡಿದರು. ಮುಖಂಡರಾದ ಸುರೇಶ್ ಶೆಟ್ಟಿ ಹೇರೂರು, ಬಾಬು ಕುಬಣೂರು, ಅಮಿತ್ ಪರಂಕಿಲ, ವಿಜಯ್ ರೈ, ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು. ನಾಗೇಶ್ ಸ್ವಾಗತಿಸಿ, ವಂದಿಸಿದರು.




