ಬದಿಯಡ್ಕ: ಕೊಲ್ಲಂಗಾನ ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರಸ್ತುತ ಸಾಲಿನ ತಿರುಗಾಟದ ಮೊದಲ ಸೇವೆಯಾಟ ಇಂದು ಶ್ರೀಕ್ಷೇತ್ರ ಕೊಲ್ಲಂಗಾನದಿಂದ ಆರಂಭಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಇಂದು ರಾತ್ರಿ ಶ್ರೀಚಕ್ರ ಪ್ರತಿಷ್ಠಾ ಮಹೋತ್ಸವ, ಶ್ರೀದೇವರಿಗೆ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಆ ಬಳಿಕ ಅಶ್ವಮೇಧ ಪ್ರಸಂಗದ ಬಯಲಾಟದೊಂದಿಗೆ ವಾಷರ್ಿಕ ತಿರುಗಾಟ ಆರಂಭಗೊಳ್ಳಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


