ಮಿನಿ ಜಾಂಬೂರಿ-ಸಾಹಸ ಕ್ರೀಡೆಗಳಿಗೆ ಚಾಲನೆ
ಕುಂಬಳೆ: ಸಾಹಸಮಯ ಪ್ರವೃತ್ತಿಯು ವಿದ್ಯಾಥರ್ಿಗಳ ಮನದಲ್ಲಿ ಗಟ್ಟಿಯಾಗಿ ಬೇರೂರಲು ಇಂತಹ ಶಿಬಿರಗಳು ಸಹಕಾರಿ ಎಂದು ಕುಂಬಳೆ ಗ್ರಾಮಪಂಚಾಯತ್ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಅಭಿಪ್ರಾಯಪಟ್ಟರು.
ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಮಿನಿ ಕ್ಯಾಂಪುರಿ-2018 ಶಿಬಿರದ ಎರಡನೇ ದಿನ ಶನಿವಾರ ನಡೆದ ಸಾಹಸಮಯ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಒಂದು ಬಾರಿ ಸ್ಕೌಟ್ ಅಥವಾ ಗೈಡ್ನಲ್ಲಿ ಪ್ರವೇಶವಾದರೆ ಎಂತಹ ಕಷ್ಟಗಳನ್ನೂ ಎದುರಿಸುವಂತಹ ಆತ್ಮಸ್ತೈರ್ಯ ಲಭಿಸುತ್ತದೆ. ಧೈರ್ಯ, ಸ್ತೈರ್ಯವಿರುವ ವ್ಯಕ್ತಿತ್ವದ ರೂಪುಗೊಳ್ಳವ ಮೂಲಕ ನಮ್ಮ ದೇಶದ ಹೆಮ್ಮೆಯ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದರು.
ಸೂರಂಬೈಲು ಸರಕಾರೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಟೀಚರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ನಂತರ ವಿದ್ಯಾಥರ್ಿಗಳು ಸಾಹಸ ಪ್ರದರ್ಶನದಲ್ಲಿ ಪಾಲ್ಗೊಂಡರು. 29 ಶಾಲೆಗಳಿಂದ 626 ವಿದ್ಯಾಥರ್ಿಗಳು ಹಾಗೂ 200ಕ್ಕೂ ಹೆಚ್ಚು ಸ್ಕೌಟ್ ಅಧ್ಯಾಪಕರು ಒಟ್ಟು 27 ವಿವಿಧ ರೀತಿಯ ಸಾಹಸೀ ಪ್ರವೃತ್ತಿಯಲ್ಲಿ ಪಾಲ್ಗೊಂಡರು.
ಇದೇಸಂದರ್ಭದಲ್ಲಿ ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಅವರು ಶಿಬಿರಕ್ಕೆ ಭೇಟಿಯಿತ್ತು ಕ್ಯಾಂಪುರಿಯಲ್ಲಿ ಭಾಗವಹಿಸಿದರು. ಜಿಲ್ಲಾ ಸ್ಕೌಟ್ ಕಮಿಶನರ್ ಗುರುಮೂತರ್ಿ ನಾಯ್ಕಾಪು ನಿರೂಪಿಸಿದರು. ವಿನೋದ್ ಚೇವಾರು ಸ್ವಾಗತಿಸಿ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶ್ರೀನಿವಾಸನ್ ಧನ್ಯವಾದವನ್ನಿತ್ತರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬನರ್ಾಡ್, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದಭರ್ೆಮಾರ್ಗ, ಎನ್.ಎನ್.ರಾವ್ ಮನ್ನಿಪ್ಪಾಡಿ, ಪುರುಷೋತ್ತಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.