HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ``ರಂಗಸಿರಿ ದಸರಾ ಯಕ್ಷಪಯಣ"ದ ಧ್ವನಿತರಂಗ
   ನಮ್ಮ ಮಣ್ಣಿನ ಕಲೆ,ಸಾಹಿತ್ಯ, ಸಂಸ್ಕೃತಿಗಳ ಸಮಗ್ರ ಅಧ್ಯಯನಕ್ಕೆ ಅವಕಾಶವಿರುವ ಏಕೈಕ ಸಂಸ್ಥೆಯಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ರೂಪುಗೊಳ್ಳುತ್ತಿದೆ. 2010 ಮೇ 1ರಂದು ಉದ್ಘಾಟನೆಗೊಂಡು ನಿರಂತರವಾಗಿ ಯಕ್ಷಗಾನ ನಾಟ್ಯ, ಹಿಮ್ಮೇಳ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ  ತರಗತಿಗಳನ್ನು ನಡೆಸುತ್ತಾ ಬಂದಿದೆ. ಯಕ್ಷಗಾನ ಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ಪ್ರೇರಣೆಯಿಂದಾಗಿ ಶ್ರೀಶ ಕುಮಾರ ಪಂಜಿತ್ತಡ್ಕವರಿಂದ ಸಂಸ್ಥೆ ರೂಪುಗೊಂಡಿತು. ಲಕ್ಷ್ಮಣಪ್ರಭು, ಬೇಸಿ, ಶಂಕರಸಾರಡ್ಕ, ಕೃಷ್ಣ ಭಟ್, ನಾರಾಯಣ ಭಟ್, ವಿರಾಜ್ ಅಡೂರು, ಪ್ರಭಾವತಿ ಕೆದಿಲಾಯ, ಸೀತಾಲಕ್ಷ್ಮಿ, ರಾಜೇಂದ್ರ ವಾಂತಿಚ್ಚಾಲು, ಮಧುರಗಂಗಾ, ವಿದ್ಯಾ ಮೊದಲಾದ ಸಮಾಜದ ಹಿರಿ ಕಿರಿಯರಿಂದ ಸಲಹೆ, ಸಹಕಾರ ದೊರೆಯಿತು. ಯಕ್ಷಗಾನ ನಾಟ್ಯ,  ಹಿಮ್ಮೇಳ ತರಗತಿ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ ತರಗತಿಗಳೂ ನಡೆಯುತ್ತಿದೆ. ಯಕ್ಷಗಾನ ತರಗತಿಗಳು ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ(ಮೂಕಾಂಬಿಕಾ ಸವರ್ಿಸ್ ಸ್ಟೇಶನ್ ಎದುರು) ಪ್ರತಿವಾರ ನಡೆಯುತ್ತಿದೆ. ಬಾಯಾರು ಸೂರ್ಯನಾರಾಯಣ ಪದಕಣ್ಣಾಯರು ಗುರುಗಳಾಗಿ ಜವಾಬ್ದಾರಿ ಹೊತ್ತಿದ್ದಾರೆ. ಶಾಸ್ತ್ರೀಯ ಸಂಗೀತ ತರಗತಿಯು ನವಜೀವನ ಪ್ರೌಢಶಾಲೆಯಲ್ಲಿ ನಡೆಯುತ್ತಿದೆ. ಸಂಗೀತ ವಿದುಷಿ ಗೀತಾಸಾರಡ್ಕ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಡಾ| ಸ್ನೇಹಾಪ್ರಕಾಶ್ ಪೆಮರ್ುಖ ಅವರು ಪ್ರಸ್ತುತ ಬದಿಯಡ್ಕ ಸಮೀಪ ಪೆಮರ್ುಖದ ತಮ್ಮ ಮನೆಯಲ್ಲೆ ಸುಗಮ ಸಂಗೀತ ತರಗತಿಗಳನ್ನು ನಡೆಸುತ್ತಿದ್ದಾರೆ.
    ಯಕ್ಷಗಾನ ತಂಡವು ವರ್ಷದಲ್ಲಿ ಹಲವಾರು ಕಡೆಗಳಲ್ಲಿ 20ಕ್ಕೂ ಮಿಕ್ಕಿ ಪ್ರದರ್ಶನ ನೀಡಿ ಜನಮನ್ನಣೆ ಪಡೆದಿದೆ. ದ.ಕ., ಶಿವಮೊಗ್ಗ, ಬೆಂಗಳೂರು, ಸಾಣೇಹಳ್ಳಿ, ಬೇಲೂರು, ಕಾಸರಗೋಡು, ಕೇರಳದ ವಿವಿಧೆಡೆಗಳಲ್ಲಿ, ತಮಿಳುನಾಡಿನ ಕೊಯಂಬತ್ತೂರು ಹೀಗೆ ಇದುವರೆಗೆ ಸುಮಾರು 500 ವೇದಿಕೆಗಳಲ್ಲಿ ಪ್ರದರ್ಶನ ನೀಡಿದೆ. ಸಂಗೀತ ವಿಭಾಗದ ವಿದ್ಯಾಥರ್ಿಗಳೂ ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿದೆ. ಸರಾಸರಿ 500 ಪ್ರೇಕ್ಷಕರಂತೆ ಅಂದಾಜು 25,000ಕ್ಕೂ ಮಿಕ್ಕಿ ಪ್ರೇಕ್ಷಕರನ್ನು ರಂಗಸಿರಿ ತಲುಪಿದೆ. ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಉಳಿಕೆಯ ಉದ್ದೇಶದೊಂದಿಗೆ ಕಳೆದ ವರ್ಷ ದಸರಾ ಸಿರಿ 2017 ಎಂಬ ವಿನೂತನ ಕಲ್ಪನೆಯ ನಾಡಹಬ್ಬ ಆಚರಣೆಯ ಸ್ಪಧರ್ೆಯನ್ನು ಆಯೋಜಿಸಿತ್ತು. ಈ ವರ್ಷ ರಂಗಸಿರಿಯ ಯಕ್ಷಗಾನ ತಂಡವು ಕನ್ನಡ ಸಂಸ್ಕೃತಿಯ ಪ್ರಚರಣಾರ್ಥ `ರಂಗಸಿರಿ ದಸರಾ ಯಕ್ಷ ಪಯಣ' ಎಂಬ ಯಕ್ಷಗಾನ ಪ್ರಯಾಣವನ್ನು ನಡೆಸಿದೆ. ಕಾಸರಗೋಡಿನ ಮಕ್ಕಳ ಯಕ್ಷಗಾನ ತಂಡವೊಂದು ಮೊದಲಬಾರಿ ಹೀಗೆ ಯಕ್ಷಗಾನದ ಪಯಣ ನಡೆಸಿದ್ದು ಸಾಂಸ್ಕೃತಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಭಾಜನವಾಗಿದೆ. ನವರಾತ್ರಿಯ ದಿನಗಳಲ್ಲಿ ಆರು ದಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಬ್ರಹ್ಮರಕೂಟ್ಲು, ಬಡಾಜೆ, ಮಡ್ಯಾರು, ಅಣಂಗೂರು, ಹೊಸಂಗಡಿ, ಕದ್ರಿ ಎಂಬೀ ದ.ಕ, ಕಾಸರಗೋಡಿನ ಸ್ಥಳಗಳಲ್ಲಿ ಸಂಸ್ಥೆಯ ವಿದ್ಯಾಥರ್ಿಗಳು ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು. ಎಲ್ಲಾ ಕಡೆಗಳಲ್ಲಿಯೂ ತುಂಬಿದ ಸಭೆಯಿದ್ದುದು ಯಕ್ಷಗಾನ ಪ್ರದರ್ಶನ ಯಶಸ್ವಿಗೆ ತನ್ನದೆ ಕಾಣಿಕೆಯನ್ನಿತ್ತಿದೆ.
    ಕಾಸರಗೋಡಿನಲ್ಲಿ ಮಲಯಾಳಿ ಸಂಸ್ಕೃತಿಯ ಹೇರಿಕೆಯಾಗುತ್ತಿದೆ. ಇಲ್ಲಿನ ಸ್ಥಳೀಯ ಮಲಯಾಳ, ಕನ್ನಡ, ತುಳು ಮೊದಲಾದ ಸಂಸ್ಕೃತಿಗಳ ಮಿಶ್ರಿತ ಜೀವನ ಶೈಲಿ ಕಾಣೆಯಾಗುತ್ತಿರುವ ಆತಂಕದ ನಡುವೆ ನಮ್ಮ ಭಾಷೆ, ಸಂಸ್ಕೃತಿಯನ್ನು ರಕ್ಷಿಸುವುದೆಂದರೆ, ಅದನ್ನು ಹೆಜ್ಜೆ ಹೆಜ್ಜೆಗೂ ಬಳಸುವುದಾಗಿದೆ. ಆ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮಗಳನ್ನೂ ನಮ್ಮ ಸಂಸ್ಕೃತಿಯೊಂದಿಗೆ ಜೋಡಿಸಬೇಕು. ಸಂಸ್ಕೃತಿಯನ್ನುಳಿಸುವ ನಿಟ್ಟಿನಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಯಕ್ಷಗಾನ ಪಯಣವನ್ನು ದಸರಾ ಹೆಸರಿನಲ್ಲಿ ಮಾಡಿದುದು ನಿಜಕ್ಕೂ ಶ್ಲಾಘನೀಯ ವಿಚಾರವಾಗಿದೆ. ಓಣಂ ಆಚರಣೆಯ ಭರಾಟೆಯ ನಡುವೆ ಕಾಸರಗೋಡು ಮತ್ತೆ ನಾಡಹಬ್ಬವಾಗಿ ದಸರಾವನ್ನು ಕಾಣತೊಡಗಿರುವುದು ಆಶಾಭಾವವಾಗಿದೆ. ನಾಡಹಬ್ಬವೆಂದು ಈ ಮಣ್ಣಿನಲ್ಲಿ ಆಚರಿಸಲ್ಪಡುತ್ತಿದ್ದ ದಸರಾವನ್ನು ಮತ್ತೆ ಜನಮಾನಸದಲ್ಲಿ ನೆಲೆಗೊಳಿಸಲು ರಂಗಸಿರಿಯಂತಹ ಸಂಸ್ಥೆಗಳು ನಡೆಸುವ ಶ್ರಮ ಗುರುತರವಾದದ್ದು. ಯಕ್ಷಗಾನ ಪಯಣದ ಮೂಲಕ ಕನ್ನಡದ ತೇರನ್ನು ರಂಗಸಿರಿ ಸಾಂಸ್ಕೃತಿಕ ವೇದಿಕೆಯು ನಾಡಿನಾದ್ಯಂತ ಎಳೆದಿರುವುದು ಒಳ್ಳೆಯ ಕಾರ್ಯವೆಂದು ಪ್ರಶಂಸೆ ವ್ಯಕ್ತವಾಗಿದೆ.
         ಸಮಾಜದಿಂದ ಬಂದ ಅಭಿಪ್ರಾಯಗಳು:
   ಕಾಸರಗೋಡಿನಲ್ಲಿ ಹಿರಿದಾದ ಪರಂಪರೆಯಿರುವ ನವರಾತ್ರಿ ಹಬ್ಬದ ಸಾಂಸ್ಕೃತಿಕ ಸ್ವರೂಪವಾದ ದಸರಾ ಆಚರಣೆಯನ್ನು ಅದೇ ಬಗೆಯ ಪ್ರಾಚೀನ ಪರಂಪರೆಯ ಯಕ್ಷಗಾನದೊಂದಿಗೆ ಸಂಯೋಜಿಸಿ ಉಳಿಸಿ ಬೆಳೆಸುವ ವಿನೂತನ ಕಲ್ಪನೆ ರಂಗಸಿರಿ ಯಕ್ಷಪಯಣ. ಇದರಿಂದ ಕನ್ನಡ ಭಾಷೆ ಸಂಸ್ಕೃತಿ ಆಚರಣೆ ಪರಂಪರೆಗಳನ್ನು ಉಳಿಸುವ ಧ್ಯೇಯಕ್ಕೆ ಖಂಡಿತವಾಗಿಯೂ ಪ್ರಯೋಜನವಿದೆ. ಪ್ರತಿವರ್ಷ ದಸರಾ ಮಾಸದಲ್ಲಿ ಅಂದರೆ ಸಾಮಾನ್ಯವಾಗಿ ಅಕ್ಟೋಬರ್  ತಿಂಗಳಿನಲ್ಲಿ  ನಡೆಸುವ ಎಲ್ಲ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಸರಾ ಹೆಸರಿನಲ್ಲಿ ನಡೆಸುವ ಪರಿಕಲ್ಪನೆಯನ್ನು ಕಾಸರಗೋಡಿನ ಎಲ್ಲ ಕನ್ನಡಪರ ಸಂಘಟನೆಗಳು ಅನುಸರಿಸಬೇಕು. ದಸರಾ ಆಚರಣೆ ಮತ್ತು ಯಕ್ಷಗಾನವನ್ನು ಸಂಯೋಜಿಸುವ ರಂಗಸಿರಿಯ ಯೋಜನೆ ಮಾದರಿಯಾಗಿದೆ.
    - ಡಾ. ನರೇಶ್ ಮುಳ್ಳೇರಿಯ, ಕನ್ನಡ ಹೋರಾಟಗಾರ
.................................................................................
ಯುವತಲೆಮಾರು ಕನ್ನಡ ಭಾಷೆ ಸಾಹಿತ್ಯ ಕಲೆ ಸಂಸ್ಕೃತಿ ಬಗ್ಗೆ ತಿಳಿಯಲು ಇಂತಹ ಚಟುವಟಿಕೆಗಳು ಕಾಸರಗೋಡಿನ ಲ್ಲಿ ನಿರಂತರ ನಡೆಯುತ್ತಿರಬೇಕು. ಕನ್ನಡದ ಋಣ ಇರುವವರು ತಮ್ಮ ಕೆಲಸಕಾರ್ಯಗಳಿಗಿಂತ ಹೊರತಾದ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಮುಖ್ಯಕೆಲಸದಷ್ಟೇ ಮಹತ್ವದ್ದಾಗಿರುತ್ತದೆ. ಇದನ್ನು ಅರ್ಥಮಾಡಿಕೊಂಡವರು ಕಾಸರಗೋಡಿನಲ್ಲಿರುವುದು ಕಡಿಮೆ. ನಿಮಗೆ ಅಂತಹ ಕಾಳಜಿಯಿದೆ. ಇದು ಸದಾ ಇರಲಿ.
     -ಡಾ. ರತ್ನಾಕರ ಮಲ್ಲಮೂಲೆ, ಪ್ರಾಧ್ಯಾಪಕರು, ಸರಕಾರೀ ಕಾಲೇಜು, ಕಾಸರಗೋಡು
............................................................................
      ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕದ "ರಂಗಸಿರಿ ದಸರಾ ಯಕ್ಷ ಪಯಣ" ಎನ್ನುವ ಹೆಸರಿನಿಂದ ನವರಾತ್ರಿಯ ಕಾರ್ಯಕ್ರಮಗಳು ತುಂಬಾ ಪರಿಣಾಮಕಾರಿಯಾಗಿದೆ . ಇದು ಕನ್ನಡ ಹೋರಾಟಕ್ಕೆ ತುಂಬಾ ಉಪಕಾರಿಯಾಗಿದೆ . ಅನ್ಯ ಭಾಷೆಗಳಿಗೆ ಅವಕಾಶವಿಲ್ಲದಿರುವ,ನವರಸಗಳನ್ನು ಒಳಗೊ0ಡ ಪೌರಾಣಿಕ ಕಥೆಗಳನ್ನೇ ಹೇಳುವ ಈ ಪಯಣವು ಕನ್ನಡದ ಉಳಿವಿಗೆ ತುಂಬಾ ಸಹಕಾರಿಯಾಗಿದೆ . ಒಟ್ಟಿನಲ್ಲಿ ತುಂಬಾ ಒಳ್ಳೆಯ ಯೋಜನೆಯಾಗಿದೆ
   ಶ್ರೀಜಾ ಉದನೇಶ್, ಬಾಲ ಕಲಾವಿದೆ, ರಂಗಸಿರಿ
...................................................................................................
      "ರಂಗಸಿರಿ  ದಸರಾ ಯಕ್ಷಪಯಣ" ವು ಒಂದು ಉತ್ತಮ ಯೋಜನೆ. ಗಂಡುಮೆಟ್ಟಿನ ಕಲೆ ಯಕ್ಷಗಾನದ ಮೂಲಕ ಗಡಿನಾಡಿನಲ್ಲಿ ಅಚ್ಛ ಕನ್ನಡದ ಉಳಿವಿಗೆ ಇದು ಪೂರಕ. ಇದು ನವರಸಭರಿತ ಕಲೆಯಾಗಿದ್ದು ಯಕ್ಷಗಾನದ ಛಾಪನ್ನು ಉಜ್ವಲಗೊಳಿಸಿದೆ.
-- ದೇವಕಿ .ಯು. ಕುಂಬ್ಳೆ
............................................................................................................
     ರಂಗಸಿರಿ ದಸರಾ ಯಕ್ಷಪಯಣ ಒಳ್ಳೆಯದಾಗಿತ್ತು. ಯಕ್ಷಗಾನದಲ್ಲಿ ಮಾತ್ರ ಕನ್ನಡ ಭಾಷೆಯನ್ನು ಉಪಯೋಗಿಸುತ್ತಾರೆ. ಇದರಿಂದಾಗಿ ಭಾಷೆಯೂ ಅದರ ಮೂಲಕ ಸಂಸ್ಕೃತಿಯೂ ಉಳಿಯಬಹುದೆಂದು ನನ್ನ ಅಭಿಪ್ರಾಯ.
   - ಅಭಿಜ್ಞಾ.ಬಿ.ಭಟ್, ಬಾಲ ಕಲಾವಿದೆ, ರಂಗಸಿರಿ
........................................................................................................
     ಮಕ್ಕಳು ತುಂಬಾ ಆಸಕ್ತಿ ಯಲ್ಲಿ ಭಾಗ ವಹಿಸಿಕೊಂಡರು. ನಮ್ಮ ನಾಡಿನ ಕಲೆ ಸಂಸ್ಕೃತಿ ಯನ್ನು ಬೆಳೆಸಲು ನಮ್ಮ ರಂಗ  ಸಿರಿಯ ಮಕ್ಕಳು ಮುಂದಾಗುತ್ತಾರೆ. ಇನ್ನೂ ಕೂಡ ಹೆಚ್ಚಿನ ಅವಕಾಶ ನಮಗೆ ದೊರೆಯಲಿ.
--ಮನೀಶ್ ರೈ, ಬಾಲ ಕಲಾವಿದ, ರಂಗಸಿರಿ
......................................................................................................
     'ರಂಗಸಿರಿ ದಸರಾ ಯಕ್ಷ ಪಯಣ' ಒಂದು ಉತ್ತಮ ಪ್ರಯತ್ನ. ಇದರಿಂದಾಗಿ ರಂಗಸಿರಿ ಸಂಸ್ಥೆಯನ್ನು ಸಮಾಜ ಇನ್ನಷ್ಟು ಗುರುತಿಸುವಂತಾಯಿತು.ಇತರ ಸಂಘ ಸಂಸ್ಥೆಗಳಿಗೂ ರಂಗಸಿರಿ ಒಂದು ಮಾದರಿಯಾಗುವಂತೆ ಪ್ರೇರಣೆ 'ರಂಗಸಿರಿ ದಸರಾ ಯಕ್ಷ ಪಯಣ' ಆಗಿರಬಹುದು. ನಮ್ಮೆಲ್ಲರ ಪ್ರಯತ್ನದಿಂದ ಹಲವರ ಮನಸ್ಸಿನಲ್ಲಿ ಯಕ್ಷಗಾನ ಕಲಿಯುವ ಆಸಕ್ತಿ ಹುಟ್ಟಿಸಿದೆ ಎಂಬುದು ಸತ್ಯ.
- ವಿದ್ಯಾ  ಕೆ.ಎಂ. , ಯುವ ಕಲಾವಿದೆ, ರಂಗಸಿರಿ
.................................................................................................
     ರಂಗ ನಡೆ ,ನುಡಿ ,ನಾಟ್ಯ ಮತ್ತು ರಂಗ ಸಾಮಥ್ರ್ಯವೇ ರಂಗಸಿರಿಯ ಬಲ. ಇದನ್ನು ಪ್ರದಶರ್ಿಸಲು ಸಿಕ್ಕಿದ ಅವಕಾಶವನ್ನು ಮಕ್ಕಳು ಸಮರ್ಥವಾಗಿ ನಿಭಾಯಿಸಿದ್ದಾರೆ.
   ಚಂದ್ರಿಕಾ ಪಂಜರಿಕೆ
.................................................................................................

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries