ಕಲಿಕೆಗೆ ವಯಸ್ಸಿನ ಹಂಗಿಲ್ಲ=96ರ ಹರೆಯದ ಅಜ್ಜಿಗೆ ಶೇ. 98 ಅಂಕ
ತಿರುವನಂತಪುರ : ಕೇರಳ ರಾಜ್ಯ ಸಾಕ್ಷರತಾ ಮಿಷನ್ನ ಅಕ್ಷರ ಲಕ್ಷ ಪರೀಕ್ಷೆಯಲ್ಲಿ 96ರ ಹರೆಯದ ಹಿರಿಯ ಮಹಿಳೆ ಶೇ.98 ಅಂಕ ಪಡೆದುಕೊಂಡಿದ್ದಾರೆ.
ಆಲಪ್ಪುಯ ಜಿಲ್ಲೆಯ ಹರಿಪ್ಪಾಡ್ ನಿವಾಸಿ ಕಲ್ಯಾಣಿಯಮ್ಮ ಅಕ್ಷರ ಲಕ್ಷ ಪರೀಕ್ಷೆಯಲ್ಲಿ 100ರಲ್ಲಿ 98ಅಂಕಗಳನ್ನು ಪಡೆದಿರುವುದಲ್ಲದೆ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಇದಕ್ಕಾಗಿಯೇ ಕೇರಳ ಸರಕಾರದಿಂದ ಗೌರವಿಸಲ್ಪಟ್ಟಿದ್ದಾರೆ.
ಅನಕ್ಷರಸ್ಥರಿಗೆ ಶಿಕ್ಷಣ ನೀಡುವ ಯೋಜನೆಯಲ್ಲಿ ಮೊದಲ ಹಂತದ ಪರೀಕ್ಷೆಯಲ್ಲಿ ಕೇರಳದಲ್ಲಿ 43,300 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 42,933 ಮಂದಿ ತೇರ್ಗಡೆಯಾಗಿದ್ದಾರೆ. ಅವರಲ್ಲಿ 96ರ ಹರೆಯದ ಕಲ್ಯಾಣಿಯಮ್ಮ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. 100ರಲ್ಲಿ 100 ಅಂಕ ಲಭಿಸುವ ನಿರೀಕ್ಷೆಯನ್ನು ಕಲ್ಯಾಣಿಯಮ್ಮ ಇಟ್ಟುಕೊಂಡಿದ್ದರು. ಆದರೆ ಎರಡು ಅಂಕ ಕಡಿಮೆಯಾಗಿದೆ. ಅದಕ್ಕಾಗಿಯೇ ಕಳೆದ ಆರು ತಿಂಗಳಲ್ಲಿ ಕಠಿಣವಾಗಿ ಪರಿಶ್ರಮಿಸಿದ್ದಾರೆ. ಇವರ ಹೆಬ್ಬಯಕೆ ಬಹಳಷ್ಟು ಇದೆ. ಹತ್ತನೇ ತರಗತಿ ಸಮಾಂತರ ಕೋಸರ್್ ಪಾಸ್ ಮಾಡಬೇಕೆಂಬ ಇಚ್ಛೆಯನ್ನೂ ಮುಂದಿಟ್ಟಿದ್ದಾರೆ.
ಯುನೆಸ್ಕೋ ಪ್ರಕಾರ 1991ರಲ್ಲಿ ಕೇರಳ ಸಂಪೂರ್ಣ ಸಾಕ್ಷರತೆ ಹೊಂದಿದ ರಾಜ್ಯವಾಗಿ ಘೋಷಿಸಲಾಗಿತ್ತು. 2011ರ ಜನಗಣತಿ ಪ್ರಕಾರ ಮತ್ತೆ 18 ಲಕ್ಷ ಮಂದಿ ಅನರಕ್ಷರಸ್ಥರಿದ್ದರು. ಅದಾಗಲೇ ಕೇರಳ ಸರಕಾರ 2018 ಜನವರಿಯಲ್ಲಿ 26ರಂದು ಕೇರಳ ಸಾಕ್ಷರತಾ ಮಿಷನ್ನ ಅಕ್ಷರ ಲಕ್ಷ ಂ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಶೇ. 94 ಮತ್ತು 2001ರಲ್ಲಿ ಅದು ಶೇ. 90.86 ಆಗಿತ್ತು.
ಅಕ್ಷ ರ ಲಕ್ಷ ಂ ಯೋಜನೆಯ ಪ್ರಕಾರ ಬುಡಕಟ್ಟು ಜನಾಂಗದವರು, ಮೀನು ಕಾಮರ್ಿಕ ವಲಯದಲ್ಲಿನ ಅನಕ್ಷರತೆಯನ್ನು ತೊಡೆದು ಹಾಕುವುದೇ ಮುಖ್ಯ ಉದ್ದೇಶವಾಗಿದೆ. ಕೇರಳದಲ್ಲಿ ಅನಕ್ಷರತೆಯನ್ನು ಸಂಪೂರ್ಣವಾಗಿ ನಿಮರ್ೂಲನೆ ಮಾಡುವುದು ಮತ್ತು ಶೇ.100 ಸಾಕ್ಷರತೆಯನ್ನು ಸಾಧಿಸುವುದೇ ಗುರಿಯಾಗಿದೆ ಎಂದು ರಾಜ್ಯ ಸಾಕ್ಷರತಾ ಮಿಷನ್ ನಿದರ್ೇಶಕ ಪಿ.ಎಸ್. ಶ್ರೀಕಲಾ ತಿಳಿಸಿದ್ದಾರೆ.