HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಶಬರಿಮಲೆ ರಥಯಾತ್ರೆ ನ. 8 ರಂದು ಕಾಸರಗೋಡಿನಲ್ಲಿ ಆರಂಭ
               ಬಿಜೆಪಿ ಮಿತ್ರಪಕ್ಷ ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿಯವರಿಂದ ಯಾತ್ರೆಗೆ ಚಾಲನೆ
         ನ. 5 ರಂದು ದೇಗುಲದಲ್ಲಿ ವಿಶೇಷ ಪೂಜೆ, ಎರಡು ದಿನಗಳ ಕಾಲ ಶಬರಿಮಲೆಯಲ್ಲಿ ನಿಷೇಧಾಜ್ಞೆ
    ಕಾಸರಗೋಡು: ಶಬರಿಮಲೆ ವಿಚಾರದಲ್ಲಿ ರಾಜ್ಯ ಎಡರಂಗ ಸರಕಾರ ಕೈಗೊಂಡ ಹಿಂದೂ ವಿರೋಧಿ ನೀತಿಗೆದುರಾಗಿ ರಾಜ್ಯ ಬಿಜೆಪಿಯು ಶಬರಿಮಲೆ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ನ.8 ರಂದು ಆರಂಭಗೊಳ್ಳುವ ರಥಯಾತ್ರೆಯನ್ನು ಕಾಸರಗೋಡಿನ ಪುರಾಣ ಪ್ರಸಿದ್ಧ ಮಧೂರು ಮದನಂತೇಶ್ವರ ದೇವಸ್ಥಾನ ಪರಿಸರದಲ್ಲಿ ಬಿಜೆಪಿ ಮಿತ್ರಪಕ್ಷ ಭಾರತ ಧರ್ಮ ಜನ ಸೇನಾ(ಬಿಡಿಜೆಎಸ್) ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ ಉದ್ಘಾಟಿಸಲಿದ್ದಾರೆ. 6 ದಿನಗಳ ಕಾಲ ವಿವಿಧ ಜಿಲ್ಲೆಗಳ ಮೂಲಕ ಸಾಗುವ ರಥಯಾತ್ರೆಯು ನ. 13 ರಂದು ಶಬರಿಮಲೆಗೆ ತಲುಪಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ತಿಳಿಸಿದ್ದಾರೆ. ರಥಯಾತ್ರೆಯನ್ನು ಪಿ.ಎಸ್ ಶ್ರೀಧರನ್ ಪಿಳ್ಳೆ ಮುನ್ನಡೆಸಲಿದ್ದು, ಕೇರಳದ ಪ್ರಭಾವಿ ಈಳವ ಸಮುದಾಯದ ನೇತಾರ ವೆಳ್ಳಾಪಳ್ಳಿ ನಟೇಶನ್ ಅವರ ಪುತ್ರ ತುಷಾರ್ ಯಾತ್ರೆಯಲ್ಲಿ ಮುಂಚೂಣಿ ಪಾತ್ರ ವಹಿಸಲಿದ್ದಾರೆ.
    ಶಬರಿಮಲೆಯಲ್ಲಿ ಎಲ್ಲ ವಯೋಮಾನದ ಸ್ತ್ರೀ ಪ್ರವೇಶದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ಒಟ್ಟು 3000 ಮಂದಿ ವಿರುದ್ಧ ರಾಜ್ಯ ಸರಕಾರ ದೂರು ದಾಖಲಿಸಿದ್ದು, ಹಲವರನ್ನು ಬಂಧಿಸಿದೆ. ನಾಸ್ತಿಕ ರಾಜ್ಯ ಸರಕಾರದ ವಿರುದ್ಧ ಆಸ್ತಿಕ ಹಿಂದೂ ಸಮಾಜದ ಶಕ್ತಿ ಪ್ರದರ್ಶನವನ್ನು ರಥಯಾತ್ರೆಯ ಮೂಲಕ ತೋರಿಸಲಾಗುವುದು ಎಂದು ಶ್ರೀಧರನ್ ಪಿಳ್ಳೆ ಹೇಳಿದ್ದಾರೆ.
    ಶಬರಿಮಲೆಯಲ್ಲಿ ಬಿಗು ಭದ್ರತೆ:
    ನ. 5 ರಂದು ಚಿತ್ತಿರಾ ಅಟ್ಟ ತಿರುನಾಳ್ ಅಂಗವಾಗಿ ಒಂದು ದಿನದ ಕಾಲ ಶಬರಿಮಲೆ ದೇಗುಲ ತೆರೆಯಲಾಗುತ್ತದೆ. ಈ ಸಮಯದಲ್ಲಿ ಕ್ಷೇತ್ರ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ತಡೆಯಲು ಪೋಲಿಸ್ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಒಂದೆಡೆ ಸುಪ್ರೀಂ ಕೋಟರ್್ ತೀರ್ಪನ್ನು ಜ್ಯಾರಿಗೊಳಿಸಲು ಕಠಿಣ ನಿಧರ್ಾರವನ್ನು ಕ್ಯಗೊಂಡಿರುವ ಸರಕಾರ ಮತ್ತೊಂದೆಡೆ ಅದರ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮುಂದುವರಿಸಲು ತೀಮರ್ಾನಿಸಿರುವ ಹಿನ್ನೆಲೆಯಲ್ಲಿ ಶಬರಿಮಲೆ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ರಾತ್ರಿ 12 ಗಂಟೆಯಿಂದ ಮಂಗಳವಾರ ರಾತ್ರಿ 12 ಗಂಟೆ ತನಕ ಶಬರಿಮಲೆಯಲ್ಲಿ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗಿದೆ. ಶಬರಿಮಲೆಯನ್ನು ಸಂಪೂರ್ಣವಾಗಿ ಪೋಲಿಸ್ ತಮ್ಮ ಹಿಡಿತದಲ್ಲಿರಿಸಿದೆ. ಪೋಲಿಸ್ ಬಿಗಿ ಚಕ್ರವ್ಯೂಹ ಏರ್ಪಡಿಸಿದ್ದು, ಸುದ್ದಿ ಮಾಧ್ಯಮದವರಿಗೆ ನಿಯಂತ್ರಣ ಹೇರಲಾಗಿದೆ. ಗುಂಪು ಸೇರುವಿಕೆ, ಆಯುಧ ಕೈವಶವಿರಿಸುವಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ನೀಲಕ್ಕಲ್ನಲ್ಲಿ ಪೋಲಿಸ್ ತಪಾಸಣೆ ನಂತರದಲ್ಲಿ ಭಕ್ತಾದಿಗಳನ್ನು ದೇಗುಲಕ್ಕೆ ಬಿಡಲಾಗುವುದು ಎಂದು ರಾಜ್ಯ ಪೋಲಿಸ್ ಅಧಿಕೃತರು ತಿಳಿಸಿದ್ದಾರೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries