`ಯಕ್ಷ ಸಂಭ್ರಮ-2018' ಆಮಂತ್ರಣ ಪತ್ರ ಬಿಡುಗಡೆ
ಕಾಸರಗೋಡು: ಯಕ್ಷಾಭಿಮಾನಿ ಕೂಡ್ಲು ಇದರ ಪ್ರಥಮ ವಾಷರ್ಿಕೋತ್ಸವವನ್ನು ನ.11 ರಂದು ಭಾನುವಾರ ಕೂಡ್ಲು ಕುತ್ಯಾಳ ಶ್ರೀ ಕ್ಷೇತ್ರದಲ್ಲಿ `ಯಕ್ಷ ಸಂಭ್ರಮ-2018' ಎನ್ನುವ ಶೀಷರ್ಿಕೆಯಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಾನುಮತಿ ಪರಿಣಯ-ಚಿತ್ರಸೇನ ಕಾಳಗ' ಎನ್ನುವ ಯಕ್ಷಗಾನ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದ ಪ್ರಚಾರಾರ್ಥ ಆಮಂತ್ರಣ ಪತ್ರಿಕೆಯನ್ನು ಕೂಡ್ಲು ಕುತ್ಯಾಳ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಬಿಡುಗಡೆಗೊಳಿಸಿದರು. ಕೂಡ್ಲು ಮೇಳದ ವ್ಯವಸ್ಥಾಪಕರಾದ ರವಿರಾಜ ಅಡಿಗ, ಯಕ್ಷಾಭಿಮಾನಿ ಕೂಡ್ಲು ಸಂಸ್ಥೆಯ ಅಧ್ಯಕ್ಷ ಸುನಿಲ್ ಗಟ್ಟಿ, ಕಾರ್ಯದಶರ್ಿ ಅಪರ್ಿತ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್, ಸದಸ್ಯರಾದ ಚಂದ್ರಮೋಹನ ಕೂಡ್ಲು, ಅರುಣ್ ಪಾಟಾಳಿ, ಸುಜನ್ ಕೂಡ್ಲು, ಅಂಜಿತ್ ಕೂಡ್ಲು, ಕಿಶೋರ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.
ನ.11 ರಂದು ಮಧ್ಯಾಹ್ನ 2.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕುಂಟಾರು ರವೀಶ ತಂತ್ರಿ ಅವರು ಉದ್ಘಾಟಿಸುವರು. ಕ್ಷೇತ್ರದ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರು ಆಶೀರ್ವಚನ ನೀಡುವರು. ಮಧೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಕೂಡ್ಲು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರವಿರಾಜ ಅಡಿಗ ಮತ್ತು ವೆಂಕಟ್ರಮಣ ಹೊಳ್ಳ ಕಾಸರಗೋಡು ಶುಭಹಾರೈಸುವರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸುವರು. ಹಿರಿಯ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರನ್ನು ಗೌರವಿಸಿ ಸಮ್ಮಾನಿಸಲಾಗುವುದು.
ಕಾರ್ಯಕ್ರಮದ ಅಂಗವಾಗಿ ಚಿಕಿತ್ಸಾ ಧನ ಸಹಾಯ ನಿಧಿಯನ್ನು ವಿತರಿಸಲಾಗುವುದು. ಕೂಡ್ಲು ಮೇಳಕ್ಕೆ ರಜತ ಕಿರೀಟವನ್ನು ಸಮಪರ್ಿಸಲಾಗುವುದು. ಬಳಿಕ 3.30 ರಿಂದ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.