ಕೊಚ್ಚಿ: ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸುವುದು ಬೇಡ ಎಂದು ಬಿಜೆಪಿ ಎಲ್ಲಯೂ ಹೇಳಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೆ ಮಂಗಳವಾರ ಸುದ್ದಿಗೋಷ್ಠಿಯೊ0ದರಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. 10 ವಯಸ್ಸಿಗಿಂತ ಮೇಲಿನ ಮತ್ತು ಐವತ್ತು ವಯಸ್ಸಿಗಿಮತ ಕೆಳಗಿನ ಮಹಿಳೆಯರು ಶಬರಿಮಲೆ ಪ್ರವೇಶಿಸಬಾರದೆಂಬ ನಂಬಿಕೆಯನ್ನು ನಾವು ಸಂರಕ್ಷಿಸಲು ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಆದರೆ ಸರಕಾರಗಳು ಮತ್ತು ಕೆಲವು ಮಾಧ್ಯಮಗಳು ಬಿಜೆಪಿಯು ಎಲ್ಲಾ ಹರೆಯದ ಮಹಿಳಾ ಪ್ರವೇಶವನ್ನು ನಿಷೇಧಿಸಿ ಹೋರಾಟ ಮಾಡುತ್ತಿದೆ ಎಂಬ ತಪ್ಪು ಅಭಿಪ್ರಾಯವನ್ನು ಹರಡುವಲ್ಲಿ ನಾಗಾಲೋಟದಲ್ಲಿದೆ ಎಮದು ಶ್ರೀಧರನ್ ಪಿಳ್ಳೆ ಈ ಸಂದರ್ಭ ತಿಳಿಸಿದರು.
ಕೊಚ್ಚಿಯಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರೀಯೆ ನೀಡಿ ಮಾತನಾಡಿದರು.
ತನ್ನ ಹೇಳಿಕೆಗಳನ್ನು ತೋಚಿದಂತೆ ಮಾಧ್ಯಮಗಳ ಮೂಲಕ ತಿರುಚುವ ಯತ್ನ ನಡೆಯುತ್ತಿದೆ. ಯುವತಿಯರನ್ನು ಶಬರಿಮಲೆಗೆ ಪ್ರವೇಶಿಸಲು ಬಿಡೆವು ಎಂಬ ಹೇಳಿಕೆ ನೀಡಿರುವುದು ಸಂಪೂರ್ಣ ತಿರುಚಲ್ಪಟ್ಟ ಹೇಳಿಕೆಯಾಗಿದೆ. ತಾನು ಮಹಿಳಾ ಪ್ರವೇಶದ ಬಗ್ಗೆ ಮಾತ್ರ ಹೇಳಿಕೆ ನೀಡಿರುವುದಾಗಿ ಪಿಳ್ಳೆ ಸಮಜಾಯಿಸಿ ನೀಡಿದರು.





