ಪೆರ್ಲ: ಅಯ್ಯಪ್ಪ ಸ್ವಾಮೀ ದರ್ಶನಕ್ಕೆ ತೆರಳಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಬಂಧನವನ್ನು ಪ್ರತಿಭಟಿಸಿ ಎಣ್ಮಕಜೆ ಗ್ರಾಮ ಪಂಚಾಯತ್ ಬಿಜೆಪಿ ಘಟಕದ ನೇತೃತ್ವದಲ್ಲಿ ಭಾನುವಾರ ಮೆರವಣಿಗೆ ನಡೆದು ಪೆರ್ಲ ಪೇಟೆ ಮುಖ್ಯ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಯಿತು. ಸುಮಾರು ಒಂದು ಗಂಟೆಗಳ ತನಕ ರಸ್ತೆ ತಡೆದುದರಿಂದ ಯಾವುದೇ ವಾಹನಗಳಿಗೆ ಸಂಚರಿಸಲು ಸಾಧ್ಯವಾಗಲಿಲ್ಲ.
ಪ್ರತಿಭಟನೆಯ ನೇತೃತ್ವ ವಹಿಸಿದ ಬಿಜೆಪಿಯ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದಶರ್ಿ ಸುಮಿತ್ ರಾಜ್ ಮಾತನಾಡುತ್ತಾ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಆಡಳಿತದ ಅವಧಿಯಲ್ಲಿ ಹಿಂದು ಆಚಾರ, ಸಂಸ್ಕೃತಿಯನ್ನು ದಮನಿಸಲು ಹೊರಟರೆ ಅದು ಕನಸು ಮಾತ್ರವಾದೀತು,ನನಸಾಗಲು ಭಾರತೀಯ ಜನತಾಪಕ್ಷ ಬಿಡದು ಎಂದರು.
ಹಿಂದುಳಿದ ಜಾತಿ(ಎಸ್.ಸಿ.)ಮೋರ್ಚದ ಅಧ್ಯಕ್ಷರಾದ ನಾರಾಯಣ ನಾಯ್ಕ ಹಿಂದು ಆಚಾರ, ಅನುಷ್ಠಾನಕ್ಕೆ, ಕಿಚ್ಚಿಡುವವುದಕ್ಕೆ ರಾಜ್ಯ ಸರಕಾರ ಹೊರಟಿದೆ. ಹಿಂದೂಗಳು ಶಾಂತ ರೀತಿಯಿಂದಲೇ ಪ್ರತಿಭಟನೆ ಮಾಡುತ್ತಿರುವಾಗ ಪಿಣರಾಯಿ ಸರಕಾರ ಹಿಂಸಾ ರೀತಿಯಿಂದ ದಮನಿಸಲು ತೊಡಗಿದೆ ಎಂದರು.
ಮಂಜೇಶ್ವರ ಬ್ಲಾಕ್ ಸದಸ್ಯೆ ಸವಿತಾ ಬಾಳಿಕೆ, ಎಣ್ಮಕಜೆ ಗ್ರಾ.ಪಂ.ಸದಸ್ಯೆ ಮಮತಾ ರೈ, ಟಿ.ಪ್ರಸಾದ್, ಬಜರಂಗ ದಳದ ಸಂಚಾಲಕ ಸಚಿನ್ ಬಜಕೂಡ್ಲು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬಿಜೆಪಿ ಎಣ್ಮಕಜೆ ಪಂ.ಸಮಿತಿ ಪ್ರಧಾನ ಕಾರ್ಯದಶರ್ಿ ಪದ್ಮ ಶೇಖರ್ ಸ್ವಾಗತಿಸಿದರು. ಸುರೇಶ್ ವಾಣೀನಗರ ವಂದಿಸಿದರು.





