ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಹಕಾರ ಭಾರತಿ ತೆಕ್ಕೆಗೆ ; ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕ್ಲೀನ್ ಸ್ವೀಪ್
0
ನವೆಂಬರ್ 11, 2018
ಮುಳ್ಳೇರಿಯ: ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ನಿದರ್ೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ
ಎಲ್ಲಾ ಸ್ಥಾನಗಳಲ್ಲೂ ಪ್ರಚಂಡ ಬಹುಮತಗಳೊಂದಿಗೆ ಜಯಿಸಿದೆ.
9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಸಾಮಾನ್ಯ ವಿಭಾಗದ 6 ಸ್ಥಾನಗಳಿಗೆ ಸಹಕಾರ ಭಾರತಿಯಿಂದ ಸ್ಪಧರ್ಿಸಿದ ಆಶೀವರ್ಾದ್ ಎಚ್.ಎಸ್, ಹರೀಶ್ ಶೆಟ್ಟಿ ಬಿ., ಜಯಕರ ಎಂ, ಲಂಬೋದರ ಬಿ.ಜಿ., ಸುಬ್ರಹ್ಮಣ್ಯ ಕಡಂಬಳಿತ್ತಾಯ, ಸುಂದರನ್ ಜಯ ಗಳಿಸಿದ್ದಾರೆ.
ಮಹಿಳಾ ವಿಭಾಗದ 3 ಸ್ಥಾನಗಳಿಗೆ ಸಹಕಾರ ಭಾರತಿ ಅಭ್ಯಥರ್ಿಗಳಾದ ಪ್ರಶಾಂತಿ ಪಿ.ನಾಯ್ಕ್, ಸುರೇಖಾ ಪಿ., ವಿದ್ಯಾಲತ ಗೆಲುವು ಸಾಧಿಸಿದ್ದಾರೆ.ಯುಡಿಎಫ್ ನಿಂದ ಸಾಮಾನ್ಯ ವಿಭಾಗದಿಂದ 4 ಹಾಗೂ ಮಹಿಳಾ ವಿಭಾಗದಿಂದ 2 ಅಭ್ಯಥರ್ಿಗಳು ಚುನಾವಣೆಯಲ್ಲಿ ಸ್ಪಧರ್ಿಸಿದ್ದರು.
ಒಟ್ಟು 11 ಸ್ಥಾನಗಳಲ್ಲಿ ನಿಕ್ಷೇಪದಾರರ ಮೀಸಲಾತಿ ವಿಭಾಗದಿಂದ ಸುಬ್ರಹ್ಮಣ್ಯ ಭಟ್ ಹಾಗೂ ಎಸ್ ಸಿ/ಎಸ್ ಟಿ ಮೀಸಲಾತಿ ವಿಭಾಗದಿಂದ ಚೋಮ ನಾಯ್ಕ್(ಅಶೋಕ್) ಅವಿರೋಧವಾಗಿ ಆಯ್ಕೆಯಾಗಿದ್ದರು.
ಕಳೆದ ಹದಿಮೂರು ವರ್ಷಗಳಿಂದ ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಆಡಳಿತದಲ್ಲಿದೆ.




