ಉಪ್ಪಳ: ಗಡಿನಾಡು ಕಾಸರಗೋಡಿನ ಕನ್ನಡ ಅಸ್ಮಿತೆಯ ಉಳಿಸುವಿಕೆಗಾಗಿ ಸನ್ನದ್ದವಾಗಿ ಕಾರ್ಯನಿರ್ವಹಿಸುತ್ತಿರುವ ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಇಂದು(ಶನಿವಾರ) ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇವುಗಳ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ಬೆಳಿಗ್ಗೆ 10 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಮಾರಂಭದಲ್ಲಿ ಗಡಿನಾಡ ಕಲಾ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರಕಾರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆಯ ಸಚಿವ ರಮೇಶ್ ಸಿ.ಜಿಗಜಿಣಗಿ ಉದ್ಘಾಟಿಸುವರು. ಕನರ್ಾಟಕ ಸರಕಾರದ ಸಣ್ಣ ಕೈಗಾರಿಕಾಸಚಿವ ಎಸ್.ಆರ್.ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರಧಾನಗೈಯ್ಯುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಕನರ್ಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇ ಗೌಡ, ಉಪಸ್ಥಿತರಿರುವರು.
ಕನರ್ಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಸಯ್ಯದ್ ಮೊಯ್ದಿ ಅಲ್ತಾಫ್, ಕೇರಳ ಜವುಳಿ ನಿಗಮದ ಅಧ್ಯಕ್ಷ ಸಿ.ಆರ್.ವಲ್ಸನ್, ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದು ಶುಭಹಾರೈಸುವರು. ವಿಶೇಷ ಆಹ್ವಾನಿತರಾಗಿ ಮಂಗಲ್ಪಾಡಿ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ.ಮುಸ್ತಫಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ., ಉದ್ಯಮಿ ಯು.ಕೆ.ಯೂಸುಫ್ ಮೊದಲಾದವರು ಉಪಸ್ಥಿತರಿರುವರು.
ಉದ್ಘಾಟನಾ ಸಮಾರಂಭದ ಬಳಿಕ ಕವಿ, ಪತ್ರಕರ್ತ ಕೆ.ರಾಧಾಕೃಷ್ಣ ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಆ ಬಳಿಕ ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಕತ್ವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ನಿವೃತ್ತ ಉಪ ಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ಸಂಧ್ಯಾಗೀತಾ ಬಾಯಾರು, ವಿದ್ಯಾಗಣೇಶ್ ಅಣಂಗೂರು ನಿರ್ವಹಿಸುವರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗುವ ಸಾಧಕರು:
ಸಮಾರಂಭದ ಉದ್ಘಾಟನಾ ವೇದಿಕೆಯಲ್ಲಿ ವಿಶೇಷ ಸಾಧನೆ- ಕೊಡುಗೆಗಳ ಮೂಲಕ ವಿವಿಧ ವಿಭಾಗಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನಗೈಯ್ದು ಗೌರವಿಸಲಾಗುವುದು. ಸಾಮಾಜಿಕ ಹಸಿರು ಅರಿವಿನ ರೂವಾರಿ ನಾಡೋಜ ಸಾಲುಮರದ ತಿಮ್ಮಕ್ಕ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್, ಶಾ.ಮಂ.ಕೃಷ್ಣರಾಯ, ಜಾನಪದ ಕಲಾವಿದ ಕುಟ್ಟಿ ಬಜಕ್ಕೂಡ್ಲು, ಹಿರಿಯ ಪತ್ರಕರ್ತ, ಕವಿ-ಸಾಹಿತಿ ಮಲಾರು ಜಯರಾಮ ರೈ, ಮುನಿಯಾಲು ಉದಯ ಶೆಟ್ಟಿ, ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ, ತೋನ್ಸೆ ವಿಜಯಕುಮಾರ್ ಶೆಟ್ಟಿ, ಎಸ್.ಜಗದೀಶ್ಚಂದ್ರ ಅಂಚನ್, ಮೊಹಮ್ಮದ್ ಆಸೀಫ್ ಸವಣೂರು, ಮಡಿಕೇರಿ ಸುಳ್ಳಿಮಾಡದ ಗೌರಿ ನಂಜಪ್ಪ , ಅವರುಗಳನ್ನು ಗೌರವಿಸಲಾಗುವುದು.






