ಉಪ್ಪಳ: ಕುರುಡಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ನೂತನ ದ್ವಾರದ ಮುಹೂರ್ತ ವೇದಮೂತರ್ಿ ಬೋಳಂತಕೇಡಿ ರಾಮ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಕಾರ್ಯಕ್ರಮದಂಗವಾಗಿ ನಡೆದ ಧಾಮರ್ಿಕ ಸಭೆಯನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿ ಧರ್ಮ ಯಾವಾಗಲೂ ಶಾಶ್ವತವಾಗಿರುತ್ತದೆ. ಅದಕ್ಕೆ ಅವನತಿ ಎಂಬುದು ಇಲ್ಲ. ಪರಸ್ಪರ ಅರಿತುಕೊಂಡು ಸಂಘಟಿತರಾಗಿ ಭಗವದ್ ಸಂಕೀರ್ತನೆಯ ಮೂಲಕ ಬದುಕಿನ ಸಾಫಲ್ಯತೆ ಗಳಿಸುವುದರಿಂದ ಯಶ ನಮ್ಮದಾಗುವುದು ಎಂದು ತಿಳಿಸಿದರು.
ಉಪಸ್ಥಿತರಿದ್ದ ಕೊಂಡೆವೂರು ಶ್ರೀನಿತ್ಯಾನಂದಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿಯವರು ಮಾತನಾಡಿ, ಸ್ತ್ರೀಯರಿಗೆ ಸಮಾನತೆಯನ್ನು ಕೊಟ್ಟ ಸಂಸ್ಕೃತಿಯಲ್ಲ ನಮ್ಮದು. ಪುರುಷರಿಗಿಂತಲೂ ಮಹತ್ವದ ಸ್ಥಾನವನ್ನು ಕೊಟ್ಟ ಸಂಸ್ಕೃತಿ ನಮ್ಮದು. ಈ ನಿಟ್ಟಿನಲ್ಲಿ ವೃಥಾ ಗೊಂದಲ ಸೃಷ್ಟಿಸುವ, ಮನಸ್ಸುಗಳನ್ನು ನೋಯಿಸುವ ಕಾರ್ಯ ನಡೆಯುತ್ತಿರುವುದು ಖೇದಕರವಾಗಿದ್ದು, ಭಗವದ್ ಭಗವಂತನ ಅನುಗ್ರಹಕ್ಕೆ ಕಷ್ಟ-ಕ್ಲಿಷ್ಟ ಮಾರ್ಗಗಳ ಬಗ್ಗೆ ಗಲಿಬಿಲಿ ಬೇಡ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂತರ್ಿ ಬೋಳಂತಕೋಡಿ ರಾಮ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷದ್ರ್ರುವ ಪಟ್ಲ ಪೌಂಡೇಶನ್ ಮಂಗಳೂರು ಇದರ ಗೌರವಾಧ್ಯಕ್ಷ ಮಹಾಬಲ ಶೆಟ್ಟಿ ಪಟ್ಲ ಗುತ್ತು, ಶ್ರೀ ಆದಿಮಾಯೆ ನಾಗಬ್ರಹ್ಮ ದೇವಸ್ಥಾನ ಹನ್ನೆರಡು ಮುಡಿ ಕುನರ್ಾಡು ಇಲ್ಲಿಯ ಧರ್ಮದಶರ್ಿ ರಮೇಶ್ ಕುಮಾರ್, ಉದ್ಯಮಿ ಸುರೇಶ್ ಕಾಸರಗೋಡು, ಆಸರೆ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಡಾ.ಆಶಾ ಜ್ಯೋತಿ ರೈ, ನಿವೃತ್ತ ಪೋಲೀಸು ಅಧಿಕಾರಿ ಶೀನಪ್ಪ ಪೂಜಾರಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ತಾರಾ.ವಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಲೋಹಿತ್ ಭಂಡಾರಿ ಸ್ವಾಗತಿಸಿ, ಹರಿಪ್ರಕಾಶ ಬಲ್ಲಾಲ್ ವಂದಿಸಿದರು. ಜಯಂತಿ ಉದಯ ಕುಮಾರ್ ಪೈವಳಿಕೆ ಕಾರ್ಯಕ್ರಮ ನಿರೂಪಿಸಿದರು.



