HEALTH TIPS

ಬಜಕ್ಕೂಡ್ಲು ಅಮೃತಧಾರಾದಲ್ಲಿ ಗೋಮಾತಾ ಸಪಯರ್ಾ ಹಾಗೂ ಗೋಪಾಷ್ಟಮೀ ಮಹೋತ್ಸವ ಸಂಪನ್ನ

             
            ಪೆರ್ಲ: ಕೊಟ್ಟು ಭಗವಂತನಿಂದ ಕೊಡಲ್ಪಟ್ಟ ಎಲ್ಲವನ್ನೂ ನಾವು ಭಗವಂತನಿಗೆ ಸಮಪರ್ಿಸಬೇಕು. ಭಗವಂತನ ಪ್ರಸಾದ ರೂಪವಾಗಿ ಲಭಿಸಿದುದನ್ನು ಮಾತ್ರ ನಾವು ಉಪಯೋಗಿಸಬಹುದು ಎಂದು ಶಾಸ್ತ್ರ ಹೇಳುತ್ತದೆ. ಸನಾತನ ಸಂಪ್ರದಾಯದ ಪ್ರಕಾರ ಪ್ರಾತಃಕಾಲದಿಂದ ಶಯನದ ತನಕ ನಾವು ಮಾಡುವ ಕರ್ತವ್ಯವನ್ನು ದೇವತಾರಾಧನೆಯ ಭಾವದಿಂದ ಮಾಡಬೇಕು. ದೇವರ ಅನುಗ್ರಹದಿಂದ ಮಾತ್ರ ನಮ್ಮ ಕೆಲಸಗಳು ಸುಲಲಿತವಾಗಿ ಸಾಗಲು ಸಾಧ್ಯ. ನಿತ್ಯಜೀವನದಲ್ಲಿ ಹಲವಾರು ದೇವತಾ ಕಾರ್ಯಗಳನ್ನು ಮಾಡಬೇಕಾಗಿದೆ. ಅದರಲ್ಲಿ ಗೋಪೂಜೆಯೂ ವಿಶೇಷವಾಗಿದೆ ಎಂದು ವೇದಮೂತರ್ಿ ಕೇಶವಪ್ರಸಾದ ಭಟ್ ಕೂಟೇಲು ತಿಳಿಸಿದರು.
      ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಕಳೆದ ಒಂದುವಾರದಿಂದ ನಡೆದು ಬರುತ್ತಿದ್ದ ಗೋಮಾತಾ ಸಪಯರ್ಾ ಹಾಗೂ 8ನೇ ವರ್ಷದ ಗೋಪಾಷ್ಟಮೀ ಮಹೋತ್ಸವದ ಅಂಗವಾಗಿ ಶುದ್ಧ ದೇಶೀಯ ತಳಿಯ ಗೋಮಯದಿಂದ ತಯಾರಿಸಿದ ಗೋವರ್ಧನ ಗಿರಿಯಲ್ಲಿ ಗುರುವಾರ ರಾತ್ರಿ ಭಗವಾನ್ ಶ್ರೀಕೃಷ್ಣನಿಗೆ ನಡೆದ ರಂಗಪೂಜೆಯನ್ನು ದೀಪದ ಬೆಳಕಿನಲ್ಲಿ ಪೂಜೆಗೆ ಚಾಲನೆ ನೀಡಿ ಪ್ರಾರ್ಥನೆಗೈದು ಅವರು ಮಾತನಾಡಿದರು.
        ಸಂಪ್ರದಾಯದ ಪ್ರಕಾರ ಯಾವುದೇ ಕರ್ಮಗಳು ಗೋಗ್ರಾಸ ನೀಡಿದಲ್ಲಿಗೆ ಪರಿಪೂರ್ಣವಾಗುತ್ತದೆ. ಪ್ರತಿಯೊಂದು ಕರ್ಮವೂ ಗೋವಿನಿಂದ ಪ್ರಾರಂಭವಾಗಿ ಗೋವಿನಿಂದಲೇ ಮುಕ್ತಾಯವಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಗೋವಿಲ್ಲದೆ ಮನುಷ್ಯ ಜೀವನ ಸಾಧ್ಯವಿಲ್ಲ. ಗೋವಿನ ಪಾಲನೆಯನ್ನು ಜಗತ್ತಿಗೆ ತಿಳಿಸಿಕೊಟ್ಟವನು ಭಗವಾನ್ ಗೋಪಾಲಕೃಷ್ಣನಾಗಿದ್ದಾನೆ. ಗೋವನ್ನು ಹೇಗೆ ಪಾಲಿಸಬೇಕೆಂಬ ಶ್ರೇಷ್ಠವಾದ ಸಂದೇಶವನ್ನು ನೀಡಿದ ದಿವಸವೇ ಗೋಷ್ಟಮಿ ದಿನವಾಗಿದೆ. ಅಹಂಕಾರವನ್ನು ತ್ಯಜಿಸಬೇಕೆಂಬ ಸಂದೇಶ ಈ ಮೂಲಕ ಜಗತ್ತಿಗೆ ನೀಡುತ್ತಾನೆ. ಈ ಹಿನ್ನೆಲೆಯಿಂದ ಗೋಮಯದಲ್ಲಿ ಗೋವರ್ಧನ ಪರ್ವತವನ್ನು ನಿಮರ್ಿಸಿ ಶ್ರೀಕೃಷ್ಣನನ್ನು ಪೂಜಿಸಿದಲ್ಲಿ ಆತ ಸಂತೃಪ್ತನಾಗುತ್ತಾನೆ. ತನ್ಮೂಲಕ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಅವರು ತಿಳಿಸಿದರು. 
       ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ, ಕಾಮಧೇನು ಹವನ, ಗೋವರ್ಧನ ಹವನ, ಕುಂಕುಮಾರ್ಚನೆ, ಭಜನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಅಪರಾಹ್ನ ಗೋವರ್ಧನ ಪೂಜೆ, ಭಜನ ರಾಮಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ ಗೋಪೂಜೆ, ತುಳಸೀಪೂಜೆ, ದೀಪೋತ್ಸವ ನಡೆಯಿತು. ಮಹಾಪೂಜೆಯ ಸಂದರ್ಭದಲ್ಲಿ ರಂಗಪೂಜೆ, ಅಷ್ಟಾವಧಾನ ಸೇವೆ ನಡೆಯಿತು. ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಸಮಾರಂಭ ಸಂಪನ್ನಗೊಂಡಿತು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries