ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆಬ್ರವರಿ 18 ರಿಂದ 24 ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ವಿವಿಧ ಸಮುದಾಯದವರು ತಮ್ಮ ಸಮುದಾಯದ ಕುಲವೃತ್ತಿಯ ಮೂಲಕ ಯಾಗಕ್ಕೆ ಸೇವೆ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ 10 ಕ್ಕೆ "ಬಾಕುಡ" ಸಮುದಾಯದವರು ಗದ್ದೆಯನ್ನು ಎತ್ತುಗಳ ಮೂಲಕ ಉತ್ತು ಬಿತ್ತಿ "ಬಿತ್ತನೆ ಮುಹೂರ್ತ" ನಡೆಸಿಕೊಡುವ ಮೂಲಕ ತಮ್ಮ ಸಮುದಾಯದ ಸೇವೆಗೆ ಚಾಲನೆ ನೀಡಿದರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ "ಬಾಕುಡ" ಸಮುದಾಯದ ಪ್ರಮುಖರಾದ ಪದ್ಮನಾಭ ನರಿಂಗಾನ, ತುಳಸೀದಾಸ್ ಮಂಜೇಶ್ವರ, ಬಾಬು ಮಾಸ್ತರ್ ಕುಂಜತ್ತೂರು ಸಹಿತ ಸಮುದಾಯದ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.




