ಪೆರ್ಲ:ಮಕ್ಕಳ ದಿನಾಚರಣೆ ಅಂಗವಾಗಿ ಸ್ವರ್ಗ ಅಂಗನವಾಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದ ವೈ. ದೀಪ ಬೆಳಗಿಸಿ ಉದ್ಘಾಟಿಸಿದರು.
ಗ್ರಾ.ಪಂ.ಸದಸ್ಯೆ, ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಎಂ. ಅಧ್ಯಕ್ಷತೆ ವಹಿಸಿದರು.ಪಂಡಿತ್ ಜವಹಾರ್ ಲಾಲ್ ನೆಹರು ವೇಷ ಧಾರಣೆಯೊಂದಿಗೆ ಮಕ್ಕಳ ಮೆರವಣಿಗೆ ನಡೆಯಿತು.ಮಕ್ಕಳಿಗೆ, ಹೆತ್ತವರಿಗೆ ನಾನಾ ಸ್ಪಧರ್ೆಗಳು ನಡೆದವು.ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಐಸಿಡಿಎಸ್ ಮೇಲ್ವಿಚಾರಕಿ ಸುಲೋಚನಾ, ಸ್ವರ್ಗ ಶಾಲಾ ನಿವೃತ್ತ ಶಿಕ್ಷಕ ಪಿ.ಶಿವರಾಮ ಭಟ್, ಸುಂದರ ಬಾರಡ್ಕ, ರಂಜಿತಾ ಶುಭ ಹಾರೈಸಿದರು. ರವಿ ವಾಣೀನಗರ ಸ್ವಾಗತಿಸಿ, ಚಂದ್ರಾವತಿ ಎ.ಟಿ. ವಂದಿಸಿದರು.ರಜತಾ ಭಟ್ ನಿರೂಪಿಸಿದರು.ಮಕ್ಕಳ ದಿನಾಚರಣೆಯ ಅಂಗವಾಗಿ ಪುಟಾಣಿಗಳ ರ್ಯಾಲಿ ನಡೆಯಿತು.




