ಕಾಸರಗೋಡು: ಶಬರಿಮಲೆ ಹೋರಾಟ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸರಕಾರವು ಹೋರಾಟದ ನೇತಾರರನ್ನು ಹತ್ತಿಕ್ಕುವ ಯತ್ನವಾಗಿ ಹಗೆ ತೀರಿಸುವ ಸಂಚಿನಂತೆ ಉದ್ಯೋಗದಿಂದ ಸಸ್ಪೆಂಡ್ ಕ್ರಮಕ್ಕೆ ಮುಂದಾಗಿದೆ.
ಭಾನುವಾರ ರಾತ್ರಿ ಶಬರಿಮಲೆಯಲ್ಲಿ ನಾಮಜಪ ಪ್ರತಿಭಟನೆಯ ನೇತೃತ್ ವಹಿಸಿದರೆಂದು ಆರೋಪಿಸಿ ಆರ್ ಎಸ್ ಎಸ್ ಮುಖಂಡ ಆರ್ ರಾಜೇಶ್ ಅವರ ಉದ್ಯೋಗಕ್ಕೆ ಕತ್ತರಿ ನೀಡಿ ಹಗೆ ಸಾಧಿಸಿದೆ. ಆರ್ ರಾಜೇಶ್ ಆರ್ ಎಸ್ ಎಸ್ ನಿಕಟಪೂರ್ವ ಜಿಲ್ಲಾ ಕಾರ್ಯವಾಹರಾಗಿದ್ದು, ಪ್ರಸ್ತುತ ಎನರ್ಾಕುಳಂ ಮೂವಾಟ್ಟಿಪುಳ ಸಂಘ ಜಿಲ್ಲೆಯ ಕಾರ್ಯಕಾರಿ ಸದಸ್ಯರಾಗಿದ್ದು, ಮಳಯಟ್ಟೂರು ಸರಕಾರಿ ಫಾರ್ಮಸಿಯ ಉದ್ಯೋಗಿಯಾಗಿದ್ದರು. ಪ್ರಸ್ತುತ ಹೋರಾಟದ ನೆಪದಲ್ಲಿ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿದೆ.
ಭಾನುವಾರ ಶಬರಿಮಲೆಯಲ್ಲಿ ಪೋಲೀಸರು ನಿಷೇಧಾಜ್ಞೆ ಹೊರಡಿಸಿದ್ದರೂ, ಕಾನೂನು ಗಾಳಿಗೆ ತೂರಿ ನಾಮಜಪ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭ ಪೋಲೀಸರ ಆದೇಶವನ್ನು ದಿಕ್ಕರಿಸಿ ಗೊಂದಲ ಸೃಷ್ಟಿಸಲು ಯತ್ನಿಸಿದರೆಂದು ಆರೋಪಿಸಿ 69 ಮಂದಿ ಅಯ್ಯಪ್ಪ ಭಕ್ತರನ್ನು ಬಂಧಿಸಲಾಗಿತ್ತು.ಇವರಲ್ಲಿ ಆರ್ ರಾಜೇಶ್ ಒಳಗೊಂಡಿದ್ದರು. ಪ್ರಸ್ತುತ ಬಂಧಿತರೆಲ್ಲರೂ ತಿರುವನಂತಪುರದ ಪೂಜಾಪುರ ಕೇಂದ್ರಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ.





