HEALTH TIPS

ನಿರೀಶ್ವರ ವಾದಿಗಳ ಕುತಂತ್ರ- ಜಾಗೃತಿ ಇರಲಿ: ಆರ್ ಎಸ್ ಎಸ್ ಕಾರ್ಯವಾಹ್

       
     ಕಾಸರಗೋಡು: ಶಬರಿಮಲೆಯಲ್ಲಿ ವ್ಯಾಪಕಗೊಂಡಿರುವ ಹೋರಾಟವು ಯುವತಿಯರ ಶಬರಿಮಲೆ ಸಂದರ್ಶನದ ವಿರುದ್ದ ಅಲ್ಲವೇ ಅಲ್ಲ. ಆದರೆ ಎಲ್ಲೆಡೆ ಈ ಬಗ್ಗೆ ದುವರ್ಾಖ್ಯಾನಗಳು ಕೇಳಿಬರುತ್ತಿದೆ. ಶಬರಿಮಲೆಯ ಸಾನ್ನಿಧ್ಯವನ್ನು ನಾಶಗೊಳಿಸಿ ಗಹಗಹಿಸುವ ಕನಸುಹೊತ್ತ ನಿರೀಶ್ವರ ವಾದಿಗಳ ಕುತಂತ್ರ ಪ್ರಚಾರದ ಕಾರಣ ಇಂತಹ ಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರು ಜಾಗೃತರಾಗಬೇಕು ಎಮದು ಆರ್ ಎಸ್ ಎಸ್ ಕೇರಳ ವಿಭಾಗ ಕಾರ್ಯವಾಹ್ ವಿ.ಗೋಪಾಲನ್ ಕುಟ್ಟಿ ತಿಳಿಸಿದ್ದಾರೆ.
   ಉಚ್ಚ ನ್ಯಾಯಾಲಯ ನೀಡಿರುವ ತೀಪರ್ು ಜಾರಿಗೊಳಿಸುವ ಮೊದಲು ಶಬರಿಮಲೆ ತಂತ್ರಿ ಕುಟುಂಬದವರನ್ನೂ, ಪಂದಳ ರಾಜಕುಟುಂಬದವರನ್ನೂ ಭೇಟಿಯಾಗಿ ಈ ಬಗ್ಗೆ ಸಮಾಲೋಚನೆ ನಡೆಸಬೇಕಿತ್ತು. ಅವರೊಂದಿಗಿನ ಚಚರ್ೆಯ ಬಳಿಕ ನ್ಯಾಯಾಲಯದ ತೀಪರ್ು ಜಾರಿಗೊಳಿಸುವ ಮಾಗರ್ೋಪಾಯಗಳನ್ನು ಕಂಡುಕೊಳ್ಳಬೇಕಿತ್ತು ಎಮದು ಕಾರ್ಯವಾಹ್ ತಿಳಿಸಿದರು.
  ಮಂಗಳವಾರ ಕೋಳಿಕ್ಕೋಡಿನಲ್ಲಿ ಈ ಬಗ್ಗೆ ಮಾಧ್ಯಮಗಳೊಮದಿಗೆ ಅವರು ಆಶಯ ವ್ಯಕ್ತಪಡಿಸಿದರು.
  ಈ ಮಧ್ಯೆ ಮಂಗಳವಾರ ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ ಇದೇ ಹೇಳಿಕೆ ನೀಡಿ ವ್ಯಾಖ್ಯಾನವನ್ನು ತಿರುಚುವ ಯತ್ನದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು.
 
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries