ಕಾಸರಗೋಡು: ಶಬರಿಮಲೆ ಘಟನೆಗಳಿಗೆ ಸಂಬಂಧಿಸಿ ಇಂದು (ಮಂಗಳವಾರ) ಶಬರಿಮಲೆ ಸನ್ನಿಧಿಗೆ ಭೇಟಿ ನೀಡಿರುವ ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿಯುಳ್ಳ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾಹಿತಿ ಕಲೆಹಾಕಿ ಪರಿಸ್ಥಿತಿ ಅವಲೋಕನ ನಡೆಸಿದರು. ಜೊತೆಗೆ ಅವರ ಸಂದರ್ಶನ ತೀವ್ರ ವಿವಾದಕ್ಕೂ ಒಳಗಾಯಿತು.
ನಳಿನ್ ಅವರು ಶಬರಿಮಲೆ ಸಂದರ್ಶನ ನಡೆಸಿ ವಿದ್ಯಮಾನಗಳನ್ನು ನೇರವಾಗಿ ಅವಲೋಕಿಸಿ ಕೇಂದ್ರ ಸರಕಾರಕ್ಕೆ ವರದಿ ಸಮಪರ್ಿಸುಮ ಹೊಣೆ ಹೊಂದಿ ಈ ಭೇಟಿ ನಡೆಸಿದರು.
ಅಯ್ಯಪ್ಪ ಮಾಲಾಧಾರಣೆಗೈಯ್ಯದೆ, ವ್ರತಾನುಷ್ಠಾನ ರಹಿತರಾಗಿದ್ದರು. ಆದರೆ ಕಪ್ಪು ದೋತಿ, ಶಾಲು ಹಾಗೂ ಚಪ್ಪಲಿ ಧರಿಸಿರುವುದು ತೀವ್ರ ವಿವಾದಕ್ಕೆಡೆಯಾಗಿದೆ.
ನಳಿನ್ ಅವರು ಪಂಪಾ, ನೀಲಕ್ಕಲ್, ನಡುಪಂದಲ್ ಮೂಲಕ ಹದಿನೆಂಟು ಮೆಟ್ಟಲುಗಳನ್ನು ಏರದೆ ಬೇರೆ ದಾರಿಯ ಮೂಲಕ ದರ್ಶನ ಪಡೆದರು.
ಸಂಸದರೊಂದಿಗೆ ಸತೀಶ್ ಬೋಳಿಯಾರ್, ಜಗದೀಶ್ ಅಧಿಕಾರಿ, ರಾಜ್ಯ ಸಭಾ ಸದಸ್ಯ ವಿ .ಮುರಳೀಧರನ್ ಜೊತೆಗಿದ್ದರು.
ಒಂಭತ್ತು ಬಂಧಿತ ಅಯ್ಯಪ್ಪ ವ್ರತಧಾರಿ ಸ್ವಾಮಿಗಳ ಬಿಡುಗಡೆ:!
ಮಂಗಳವಾರ ಸಂಜೆಯೂ ನಾಮಜಪ ನಿರತರಾದ ಒಂಭತ್ತು ಮಂದಿ ಅಯ್ಯಪ್ಪ ವ್ರತಧಾರಿಗಳನ್ನು ಪೋಲೀಸರು ಬಂಧಿಸಿ ಗಲಿಬಿಲಿಗೆ ಕಾರಣರಾದರು. ಈ ಸಂದರ್ಭ ವಿಷಯ ತಿಳಿದು ನಳಿನ್ ಕುಮಾರ್ ಕಟೀಲು ಅವರು ಪಂಪೆಯ ಪೋಲೀಸ್ ಠಾಣೆಗೆ ಧಾವಿಸಿ ಪೋಲೀಸರೊಂದಿಗೆ ಮಾತುಕತೆ ನಡೆಸಿ ಬಂಧಿತರನ್ನು ಬಿಡುಗಡೆಗೊಳಿಸಿದರು. ಜೊತೆಗೆ ಜಿಲ್ಲಾ ಪೋಲೀಸ್ ವರಿಷ್ಠರಿಂದ ಬಂಧನದ ಕಾರಣದ ಬಗ್ಗೆ ಸ್ಪಷ್ಟನೆ ಕೇಳಿರುವುದಾಗಿ ತಿಳಿದುಬಂದಿದೆ.






