ನವದೆಹಲಿ: ನೀವು ಭಾರತೀಯ ಸ್ಟೇಟ್ ಬ್ಯಾಂಕ್ ನ ಗ್ರಾಹಕರೇ... ಹಾಗಾದರೆ ನವೆಂಬರ್ 30ರೊಳಗೆ ಈ ಕಾರ್ಯ ಮಾಡಿ.. ಇಲ್ಲವಾದಲ್ಲಿ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಡಿತವಾಗಲಿದೆ.
ನೀವು ಎಸ್ಬಿಐ ಇಂಟನರ್ೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿದ್ದು, ಅದನ್ನು ಕಳೆದುಕೊಳ್ಳಲು ಬಯಸುತ್ತಿಲ್ಲವಾದರೆ ನವೆಂಬರ್ 30ಕ್ಕೆ ಮುನ್ನ ನಿಮ್ಮ ಸಮೀಪದ ಎಸ್ ಬಿಐ ಶಾಖೆಗೆ ಧಾವಿಸಿ. ಖಾತೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯ ನೊಂದಾವಣಿಯಾಗಿದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ನೊಂದಾವಣಿಯಾಗಿರದೇ ಇದ್ದರೆ ಮೊದಲು ಮೊಬೈಲ್ ಸಂಖ್ಯೆ ನೊಂದಾಯಿಸಿ ಎಂಬ ಸಂದೇಶ ನೀವು ಗಮನಿಸಿರಬಹುದು.
ತಮ್ಮ ಬ್ಯಾಂಕ್ ಖಾತೆಗಳೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿರದ ಗ್ರಾಹಕರ ಇಂಟನರ್ೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸುವುದಾಗಿ ಎಸ್ ಬಿಐ ತನ್ನ ವೆವ್ ಸೈಟ್ ನಲ್ಲಿ ಪ್ರಕಟಿಸಿದೆ. ಆದರೆ ಮೊಬೈಲ್ ಸಂಖ್ಯೆ ನೊಂದಾಯಿಸಿದ ಮಾತ್ರಕ್ಕೆ ಖಾತೆ ಸ್ಥಗಿತಗೊಳ್ಳುತ್ತದೆ ಎಂಬ ಆತಂಕ ಬೇಡ. ಬ್ಯಾಂಕ್ ಖಾತೆಯು ಮುಂದುವರಿಯುತ್ತದೆ. ಇಂಟನರ್ೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಮಾತ್ರ ನಿಲ್ಲಿಸಲಾಗುತ್ತದೆ.
ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ಡೆಬಿಟ್ ಕಾಡರ್್ ಬದಲಾವಣೆ
ಇದೇ ವೇಳೆ ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ನ ಡೆಬಿಟ್ ಕಾಡರ್್ ಗಳಿಂದ ವೈಯಕ್ತಿಕ ಮಾಹಿತಿ ಮತ್ತು ಕಾಡರ್್ ವಿವರಗಳನ್ನು ಕದಿಯುವುದು ವಂಚಕರಿಗೆ ಸುಲಭವಾಗಿದೆ ಮತ್ತು ಇವುಗಳನ್ನು ಮೋಸದ ವಹಿವಾಟುಗಳನ್ನು ನಡೆಸಲು ಬಳಸಬಹುದು. ಆದ್ದರಿಂದ ಹಳೆಯ ಡೆಬಿಟ್ ಕಾಡರ್್ಗಳನ್ನು ಹೊಂದಿರುವವರು ಅವುಗಳನ್ನು ಯಾವುದೇ ಶುಲ್ಕಗಳಿಲ್ಲದೆ ಶಾಖೆಗಳಲ್ಲಿ ಅಥವಾ ಆನ್ ಲೈನ್ ಎಸ್ ಬಿಐ ಮೂಲಕ ನೂತನ ಇಎಂವಿ ಚಿಪ್ ಗಳನ್ನು ಹೊಂದಿರುವ ಕಾಡರ್್ ಗಳಿಗೆ ಬದಲಿಸಿಕೊಳ್ಳುವಂತೆಯೂ ಎಸ್ ಬಿಐ ತನ್ನ ಗ್ರಾಹಕರಿಗೆ ಸೂಚಿಸಿದೆ.
ಡಿಸೆಂಬರ್ ಅಂತ್ಯದೊಳಗೆ ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ಡೆಬಿಟ್ ಕಾಡರ್್ ಗಳನ್ನು ಇಎಂವಿ ಚಿಪ್ ಡೆಬಿಟ್ ಕಾಡರ್್ ಗಳಾಗಿ ಮೇಲ್ದಜರ್ೆಗೇರಿಸುವಂತೆ ಆರ್ ಬಿಐ ಇತ್ತೀಚಿಗೆ ಬ್ಯಾಂಕ್ ಗಳು ಮತ್ತು ಗ್ರಾಹಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.





