HEALTH TIPS

ಬೆಂಗಳೂರು-ಮೈಸೂರು ನಡುವೆ ಸದ್ಯದಲ್ಲಿಯೇ ವಿಶ್ವದ ಹಳೇಯ ಉಗಿಬಂಡಿ ಸಂಚಾರ!

       
          ಬೆಂಗಳೂರು: ಚುಕು ಪುಕು...ಚುಕುಪುಕು...ರೈಲು ಪ್ರಯಾಣ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಬೆಂಗಳೂರು-ಮೈಸೂರು ನಡುವೆ ವಿಶ್ವದ ಅತಿ ಹಳೆಯ ಕಾರ್ಯನಿರ್ವಹಿಸುತ್ತಿರುವ ಬ್ರಾಜ್ ಗಾಜ್ ಉಗಿಬಂಡಿ ಸದ್ಯದಲ್ಲಿಯೇ ಆರಂಭವಾಗಲಿದೆ.
       ಈ ಉಗಿಬಂಡಿಯನ್ನು 1855ರಲ್ಲಿ ನಿಮರ್ಿಸಲಾಗಿದ್ದು ಪ್ರಸ್ತುತ ಚೆನ್ನೈಯಲ್ಲಿದೆ, ಪ್ರಮುಖ ಸಂದರ್ಭಗಳಲ್ಲಿ ಒಂದಷ್ಟು ದೂರ ಸಂಚರಿತ್ತಿರುತ್ತದೆ.
       ಯಲಹಂಕದ ರೈಲು ವೀಲ್ ಫ್ಯಾಕ್ಟರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನಿ ಲೊಹಣಿ, ಬೆಂಗಳೂರು-ಮೈಸೂರು ನಡುವೆ ಇಐಆರ್ -21 ರೈಲನ್ನು ಚಲಾಯಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಇವೆರಡು ವಿಶ್ವದಲ್ಲಿಯೇ ಅತಿ ಹಳೆಯ ಕಾರ್ಯನಿರ್ವಹಿಸುತ್ತಿರುವ ಉಗಿಬಂಡಿಗಳಾಗಿವೆ ಎಂದರು.
        ಈ ಪಾರಂಪರಿಕ ರೈಲು ಕನರ್ಾಟಕ ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಚಲಿಸುತ್ತಿದೆ. ಪ್ರತಿ ಉಗಿಬಂಡಿಯಲ್ಲಿ ಒಂದು ಅಥವಾ ಎರಡು ಬೋಗಿಗಳು ಮತ್ತು ಗರಿಷ್ಟ 60 ಪ್ರಯಾಣಿಕರವರೆಗೆ ಪ್ರಯಾಣಿಸಬಹುದು. ಚೆನ್ನೈಯಿಂದ ಅದನ್ನು ತರಿಸಲಾಗಿದೆ.
ಕನರ್ಾಟಕದಲ್ಲಿ ಅದು ಕೆಲ ದಿನ ಸಂಚರಿಸುವ ಮೂಲಕ ರಾಜ್ಯದ ಜನತೆಗೆ ಅನುಭವ ಸಿಗಲಿದೆ ಎಂದರು.
       ನಗರಕ್ಕೆ ತರುವ ಮುನ್ನ ಕೆಲವು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅದನ್ನು ಸಾಧ್ಯವಾದಷ್ಟು ಸದ್ಯದಲ್ಲಿಯೇ ಅಳವಡಿಸಲಾಗುವುದು ಎಂದು ತಿಳಿಸಿದರು.
      ಈ ಎರಡು ಉಗಿಬಂಡಿಗಳೇ ಅಲ್ಲದೆ, ಡಾರ್ಜಲಿಂಗ್ ನಲ್ಲಿ ಮೂರು ಪರ್ವತ ರೈಲುಗಳು, ಕಲ್ಕಾ-ಶಿಮ್ಲಾ ಮತ್ತು ನೀಲಗಿರಿಗಳಲ್ಲಿ ಉಗಿಬಂಡಿಗಳನ್ನು ಚಲಾಯಿಸಲಾಗುತ್ತಿದ್ದು ಅದು ಕಿರಿದಾದ ಗೇಜ್ ಟ್ರಾಕ್ ಗಳಲ್ಲಿ ಚಲಿಸಲಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries