ಕುಂಬಳೆ: ಮಂಜೇಶ್ವರ ತಾಲೂಕು ಕಚೇರಿ ಮಿನಿ ಸಿವಿಲ್ ಸ್ಟೇಶನ್ ನಿಮರ್ಾಣಕ್ಕೆ ಹೊಸಂಗಡಿ ಸಮೀಪದ ಮಾರಾಟತೆರಿಗೆ ಇಲಾಖೆಯ ಅಧೀನದಲ್ಲಿರುವ ನಿವೇಶನದಿಂದ 4 ಎಕ್ರೆ ಭೂಮಿ ನೀಡಲಾಗುವುದೆಂದು ರಾಜ್ಯ ಹಣಕಾಸು ಸಚಿವ ಡಾ.ಥಾಮಸ್ ಐಸಾಕ್ ತಿಳಿಸಿದರು.
ಕುಂಬಳೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಎಡರಂಗದ ಮಂಜೇಶ್ವರ ಮಂಡಲ ಅಭಿವೃದ್ದಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಗೆ ಭೂಮಿ ಹಸ್ತಾಂತರಿಸಿದ ಬಳಿಕ ತಾಲೂಕು ಕಚೇರಿ ಸಿಜೆಎಂ ನ್ಯಾಯಾಲಯಕ್ಕಾಗಿ ನೀಲನಕ್ಷೆ ತಯಾರಿಸಲಾಗುವುದು. ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಿಸಲು ಈಗಾಗಲೇ 20 ಕೋಟಿ ರೂ.ನಿಧಿ ನೀಡಲಾಗಿದ್ದು, ಮುಂದಿನ 20 ಕೋಟಿಯನ್ನು ಶೀಘ್ರ ವಿತರಿಸಲಾಗುವುದು. ತಾಲೂಕು ಆಸ್ಪತ್ರೆಗೆ ಅಗತ್ಯದ ನೌಕರರು ಮತ್ತು ವೈದ್ಯರನ್ನು ನೇಮಿಸಲಾಗುವುದು. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಸಾವಿರ ವಿದ್ಯಾಥರ್ಿಗಳಿಗಿಂತ ಹೆಚ್ಚು ವಿದ್ಯಾಥರ್ಿಗಳಿರುವ ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಮತ್ತು ಅಂಗಡಿಮೊಗರು ಶಾಲೆಗಳಿಗೆ ಮೂರು ಕೋಟಿ ರೂ. ಹಾಗೂ ಐದುನೂರು ವಿದ್ಯಾಥರ್ಿಗಳಿಗಿಂತಲೂ ಕಡಿಮೆಯಿರುವ ಕಡಂಬಾರ್ ಹೈಸ್ಕೂಲು ಮತ್ತು ವಾಣೀನಗರ ಪಡ್ರೆ ಶಾಲೆಗೆ ತಲಾ ಒಂದು ಕೋಟಿ ರೂ.ಗಳ ಅನುದಾನ ನೀಡಲಾಗುವುದೆಂದು ಸಚಿವರು ತಿಳಿಸಿದರು.
ಮಂಜೇಶ್ವರ ಮಂಡಲ ವ್ಯಾಪ್ತಿಯ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಭಡ್ತಿ ನೀಡಲಾಗುವುದು. ಗೋವಿಂದ ಪೈ ಸ್ಮಾರಕ ಗಿಳಿವಿಂಡಿಗೆ ಕಳೆದ ಮುಂಗಡಪತ್ರದಲ್ಲಿ ಘೋಶಿಸಲಾದ ಒಂದು ಕೋಟಿ.ರೂ.ಗಳನ್ನು ಕೂಡಲೇ ಬಿಡುಗಡೆಮಾಡಲಾಗುವುದು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಮತ್ತು ಕುಂಬಳೆ ಐಎಚ್ಆರ್ಡಿ ಕಾಲೇಜಿಗೆ ಹೆಚ್ಚುವರಿ ವಿಷಯಗಳ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು. ಜೊತೆಗೆ ಉಪ್ಪಳ ಕೈಕಂಬದ ಮಣ್ಣಂಗುಳಿ ಮೈದಾನದ ಅಭಿವೃದ್ದಿ ಚಟುವಟಿಕೆಯನ್ನು ಶೀಘ್ರ ಪೂತರ್ಿಗೊಳಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.
ಜಿಲ್ಲೆಯ ರೈತರ ಪ್ರಮುಖ ಬೆಳೆಯಾದ ಅಡಿಕೆಗೆ ಪ್ರತ್ಯೇಕ ಪ್ಯಾಕೇಜ್ ನೀಡಲಾಗುವುದು. ಆರಿಕ್ಕಾಡಿ-ಶಿರಿಯಾ ನದಿ ಅಳಿವೆ ಬಾಗಿಲಿನ ಸಮರ್ಾಣಕ್ಕೆ ಕೂಡಲೇ ಚಾಲನೆ ನೀಡಲಾಗುವುದು. ಭೂಪಟ್ಟೆ ರಹಿತರಿಗೆ ಪಟ್ಟೆ ನೀಡಲು, ರಸ್ತೆ, ಸೇತುವೆ ನಿಮರ್ಾಣ, ಶಿರಿಯಾ, ಬಂಬ್ರಾಣ, ಉಪ್ಪಳ ಅಣೆಕಟ್ಟುಗಳ ನವೀಕರಣ, ವಿವಿಧ ಕಾಲನಿಗಳ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲಾಗುವುದೆಂದು ಸಚಿವ ಐಸಾಕ್ ತಿಳಿಸಿದರು.
ಮುಖಂಡರಾದ ಸಿ.ಕೆ.ಸುಬೈರ್, ಪಿ.ಬಿ.ಮುಹಮ್ಮದ್, ಎಸ್.ಸುಧಾಕರ,ಬಿ.ಪುರುಷೋತ್ತಮ, ಅರವಿಂದ ಸಿ, ಎನ್.ಕೆ.ಜಯರಾಮ, ಕಮಲಾಕ್ಷ ಕೆ ಮೊದಲಾದವರು ವಿವಿಧಪಂಚಾಯತುಗಳನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಿದ ಸಮಸ್ಯೆಗಳ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು.
ಎಡರಂಗದ ಮಂಡಲ ಸಂಚಾಲಕ ಬಿ.ವಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಕೆ.ಪಿ.ಸತೀಶ್ಚಂದ್ರ, ಸಿ.ಎಚ್.ಕುಂಞಿಂಬು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಜಯಾನಂದ, ಸಿಪಿಐ ಮಂಡಲ ಕಾರ್ಯದಶರ್ಿ ಜಯರಾಮ ಬಲ್ಲಂಗುಡೇಲು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಪುತ್ತಿಗೆಗ್ರಾ.ಪಂ. ಅಧ್ಯಕ್ಷೆ ಅರುಣಾ ಜೆ, ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ, ಕಾರ್ಯಕರ್ತರಾದ ಪಿ.ರಘುದೇವ ಮಾಸ್ತರ್, ಶಂಕರ ರೈ ಮಾಸ್ತರ್ ಉಪಸ್ಥಿತರಿದ್ದರು. ಡಾ.ವಿ.ಪಿ.ಪಿ.ಮುಸ್ತಫಾ ಸ್ವಾಗತಿಸಿ, ವಂದಿಸಿದರು.


